Mankutimmana Kagga by D.V. Gundappa
ಧನ್ಯ ಹೊಲೆಯರ ನಂದ; ಹಿಡಿದುದವನನು ಕನಸು । ಸ್ವರ್ಣಸಭೆಯಾ ಶೈವತಾಂಡವದ ಕನಸು ॥ ಅನ್ಯ ಚಿಂತೆಗಳನದು ಬಿಡಿಸುತವನಾತ್ಮವನು । ಚಿನ್ಮಯಕೆ ಸೇರಿಸಿತು - ಮಂಕುತಿಮ್ಮ ॥ ೭೬೪ ॥
dhanya holeyara nanda; hiDidudu avananu kanasu । svarna sabheya aa shava tAnDavada kanasu ॥ anya chintegaLanadu biDisuta avanAtmavanu । chinmayake sErisitu - Mankutimma ॥ 764 ॥
ಅವನಿಗೆ ಸ್ವರ್ಣಸಭೆಯಲ್ಲಿ ಶಿವತಾಂಡವವನ್ನು ನೋಡುವ ಕನಸು. ಅನ್ಯ ಚಿಂತೆಗಳನ್ನು ಬಿಟ್ಟು ಕೇವಲ ಅದನ್ನೇ ಚಿಂತಿಸುತ್ತಿದ್ದನಾದ್ದರಿಂದ ಆ ದರುಶನದಿಂದಲೇ ಅವನ ಆತ್ಮಕ್ಕೆ ಮುಕ್ತಿ ಸಿಕ್ಕಿತು, ಅಂತಹ ‘ಹೊಲೆಯರ ನಂದ’ ಧನ್ಯ ಎಂದು ಏಕಾಗ್ರತೆಯಿಂದ ಪರತತ್ವವನ್ನು ಹೇಗೆ ಸಾಧಿಸಬಹುದು ಎಂದು ಒಂದು ಕತೆಯನ್ನು ಉದಾಹರಿಸಿ ತಿಳಿಸಲೆತ್ನಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There was once a great believer in Lord Shiva by the name - Nanda. He was born in lower caste and was forbidden from entering temples. But he had a dream of Shiva dancing his signature Tandava steps in a elegant court of Gods. After having this dream that was the only thing he could think of. His single minded devotion made him forget (free himself from) all the worldly ties and finally become one with the Holy Spirit. - Mankutimma
Video Coming Soon
Detailed video explanations by scholars and experts will be available soon.