Mankutimmana Kagga by D.V. Gundappa
ಮೇರುಪರ್ವತಕಿಹುವು ನೂರೆಂಟು ಶಿಖರಗಳು । ದಾರಿ ನೂರಿರಬಹುದು, ನಿಲುವ ಕಡೆ ನೂರು ॥ ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ । ಮೇರುಸಂಸ್ಮೃತಿಯೆ ಬಲ - ಮಂಕುತಿಮ್ಮ ॥ ೭೬೩ ॥
mEru parvatake ihuvu nUrenTu shikharagaLu । dAri nUrirabahudu, niluva kaDe nUru ॥ sAru nIm yAtrikarigella kaLeyAgirute । mEru samsmRutiye bala - Mankutimma ॥ 763 ॥
ಮೇರುಪರ್ವತಕ್ಕೆ ನೂರೆಂಟು ಶಿಖರಗಳು ಉಂಟು. ಅದನ್ನು ತಲುಪಲು ನೂರಾರು ದಾರಿಗಳಿರಬಹುದು. ದಾರಿಗುಂಟ ನೂರಾರು ತಂಗುದಾಣಗಳಿರಬಹುದು. ಅದನ್ನು ತಲುಪಲು ನಿನ್ನ ಪ್ರಯಾಣದಲ್ಲಿ ಸಹ ಯಾತ್ರಿಕರೊಡನೆ ಗೆಳೆತನವನ್ನು ಬೆಳೆಸಿಕೊಂಡು ಪ್ರಯಾಣಮಾಡು, ಆದರೆ ಮುಂದಕ್ಕೆ ಸಾಗಲು ಮೇರುವನ್ನು ತಲುಪುವ ಗುರಿಯೇ ನಿನಗೆ ಬಲಕೊಡುತ್ತದೆ ಎಂದು ಔನ್ನತ್ಯದ ನಮ್ಮ ಪ್ರಯಾಣ ಹೇಗಿರಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
There are hundreds of peaks (which one may confuse to be the actual peak) on Mt Meru.. There are hundreds of paths to the top. There are hundreds of resting points. You must mingle well with all other travelers with compassion. Let the thoughts of the Meru itself be your strength. - Mankutimma
Video Coming Soon
Detailed video explanations by scholars and experts will be available soon.