Back to List

Kagga 762 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ । ಮೇರುವನು ಮರೆತಂದೆ ನಾರಕಕೆ ದಾರಿ ॥ ದೂರವಾದೊಡದೇನು? ಕಾಲು ಕುಂಟಿರಲೇನು? । ಊರ ನೆನಪೇ ಬಲವೊ - ಮಂಕುತಿಮ್ಮ ॥ ೭೬೨ ॥

dhAruNiya naDigeyali mEruvina giriyirali । mEruvanu maretande nArakake dAri ॥ dUravAdoDadEnu? kAlu kunTiralEnu? । Ura nenapE balavo - Mankutimma ॥ 762 ॥

Meaning in Kannada

ಭೂಮಿಯ ಮೇಲೆ ನಾವು ಹುಟ್ಟಿ ಬದುಕುವಾಗ, ಗುರಿ ಉನ್ನತವಾಗಿರಲಿ. ಉನ್ನತವಾದ ಗುರಿಯನ್ನು ಮರೆತರೆ ಅದೇ ನರಕಕ್ಕೆ ದಾರಿ. ಉನ್ನತವಾದ ‘ಗುರಿ’ ದೂರವಾಗಿದ್ದರೇನು ಅಥವಾ ಅದನ್ನು ತಲುಪಲು ನಮ್ಮ ಕಾಲು ಕುಂಟಾಗಿದ್ದರೇನು, ನಮ್ಮ ಊರಿನ ನೆನಪೇ ನಮಗೆ ಅಲ್ಲಿಗೆ ತಲುಪಲು ಬಲವನ್ನು ಕೊಡುತ್ತದೆ ಎಂದು ಹೇಳುತ್ತಾ ಪಾರಮಾರ್ತ್ಯದ ಗುರಿಯಿರಬೇಕು ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ .

Meaning & Interpretation

In our life on this world, let our goal be to scale Mt Meru (Mountain of Gold). The day you forget about Meru, it will be a path to hell. What if it is far away? What if you are handicapped? Let the memory of the home town give you strength. - Mankutimma

Themes

Life

Video Section

Video Coming Soon

Detailed video explanations by scholars and experts will be available soon.