Mankutimmana Kagga by D.V. Gundappa
ಲೋಚನದ ಸಂಚಾರ ಮುಖದ ಮುಂದಕಪಾರ । ಗೋಚರಿಪುದೇನದಕೆ ತಲೆಯ ಹಿಂದಣದು? ॥ ಪ್ರಾಚೀನ ಹೊರತು ಸ್ವತಂತ್ರ ನೀಂ, ಸಾಂತವದು । ಚಾಚು ಮುಂದಕೆ ಮನವ - ಮಂಕುತಿಮ್ಮ ॥ ೭೬೧ ॥
lochanada sanchAra mukhada mundake apAra । gocharipudu Enadake taleya hindaNadu? ॥ prAchIna horetu svatantra nIm, sAntavadu । chAchu mundake manava - Mankutimma ॥ 761 ॥
ಕಣ್ಣುಗಳ ನೋಟದ ವ್ಯಾಪ್ತಿ ಮುಖದ ಮುಂದಕ್ಕೆ ಬಹಳ ಅಪಾರವಾದದ್ದು. ಆದರೆ ಅದಕ್ಕೆ ತಲೆಯ ಹಿಂದಿನದು ಕಾಣುವುದೇನು? ಇಲ್ಲ . ಹಾಗೆಯೇ ಗತಿಸಿಹೋದ ಪ್ರಾಚೀನ ವಿಷಯಗಳೆಲ್ಲವು ಮುಗಿದುಹೋದ ವಿಷಯಗಳು . ಅವುಗಳನ್ನು ತೊರೆದರೆ ನೀನು ಸ್ವತಂತ್ರನಾಗುತ್ತೀಯೆ. ಹಾಗಾಗಿ ನಿನ್ನ ಮನವನ್ನು ಮುಂದಕ್ಕೆ ತೆಗೆದುಕೊಂಡು ಹೋಗು ಎಂದು ಆದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The eyes wander in front of us a lot. What can it see from behind the head? Like that we cannot do anything about the past. The past has an end. We are free from it. You must spread your mind into the future - not past. - Mankutimma
Video Coming Soon
Detailed video explanations by scholars and experts will be available soon.