Mankutimmana Kagga by D.V. Gundappa
ಮುನ್ನಾದ ಜನುಮಗಳ ನೆನಸಿನಿಂ ನಿನಗೇನು? । ಇನ್ನುಮಿಹುದಕೆ ನೀಡು ಮನವನ್; ಎನ್ನುವವೋಲ್ ॥ ಬೆನ್ನ ಪಿಂತಿನದು ಕಾಣಿಸದಂತೆ ಪರಮೇಷ್ಠಿ । ಕಣ್ಣನಿಟ್ಟನು ಮುಖದಿ - ಮಂಕುತಿಮ್ಮ ॥ ೭೬೦ ॥
munnAda janumagaLa nenasinim ninagEnu? । innumihudake nIDu manavan: ennuvavOl ॥ benna pintinadu kANisadante paramEShThi । kaNNaniTTanu mukhadi - Mankutimma ॥ 760 ॥
ಹಿಂದಿನ ಜನ್ಮಗಳ ನೆನಪಿನಿಂದ ನಿನಗೇನಾಗಬೇಕಾಗಿದೆ. ಇಂದಿನ ಜನ್ಮಕ್ಕೆ ನೀನು ಮಹತ್ವವನ್ನು ನೀಡು ಎನ್ನುವಂತೆ ಬೆನ್ನ ಹಿಂದಿನದು ಕಾಣಿಸದಂತೆ ಮತ್ತು ಮುಂದೆ ಮಾತ್ರ ನೋಡುವಂತೆ ಮುಖದಲ್ಲಿ ಕಣ್ಣನ್ನು ಇಟ್ಟಿಹನು ನಮಗೆ ಆ ಸೃಷ್ಟಿಕರರ್ತ, ಎಂದು ಹೇಳುತ್ತಾ, ಬದುಕಿನಲ್ಲಿ ಕಳೆದುಹೋದದ್ದನ್ನು ಬಿಟ್ಟು, ಮುನ್ನೋಟವಿಟ್ಟುಕೊಳ್ಳಬೇಕೆಂದು ಸೂಚಿಸಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Don't think about the lives that we have already lived. We should concentrate in the ones which are yet to come. By keeping our eyes set in the front - God created us like this so that we should be forward looking. - Mankutimma
Video Coming Soon
Detailed video explanations by scholars and experts will be available soon.