Back to List

Kagga 759 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು । ಗುರುತಿಸೊಳಿತಿರುವುದನು ಕೇಡುಗಳ ನಡುವೆ ॥ ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು । ಹರುಷಕದೆ ದಾರಿಯೆಲೊ - ಮಂಕುತಿಮ್ಮ ॥ ೭೫೯ ॥

baradihudara eNikeyali bandihuda mareyadiru । gurutisu oLitiruvudanu kEDugaLa naDuve ॥ iruva bhAgyava nenedu bArenembudanu biDu । haruShakade dAriyelo - Mankutimma ॥ 759 ॥

Meaning in Kannada

ಕೈಗೆ ಸಿಗದೇ ಇರುವುದರ ಲೆಕ್ಕಾಚಾರದಲ್ಲಿ ಕೈಲಿರುವುದನ್ನು ಮರೆಯದೆ ಇರು. ನಮಗೆ ಕಾಣುವ ಬಹಳಷ್ಟು ಕೇಡುಗಳ ಮದ್ಯೆ ಒಳ್ಳೆಯದನ್ನು ಗುರುತಿಸು. ಕೈಗೆ ಸಿಗುವುದಿಲ್ಲ ಎಟುಕುವುದಿಲ್ಲ ಎನ್ನುವುದನ್ನು ಬಿಟ್ಟು ಕೈಯಲ್ಲೇ ಇರುವ ಭಾಗ್ಯವನ್ನು ತೃಪ್ತಿಯಿಂದ ಅನುಭವಿಸು. ಆನಂದಕ್ಕೆ, ಸಂತೋಷಕ್ಕೆ ಇದೇ ದಾರಿ ಎಂದು, ನಿಜವಾದ ಹರುಷಕ್ಕೆ ದಾರಿಯನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

Don't neglect what you have while counting what you don't have. Try to identify the good and pleasant among many unpleasant things. You should relish what you have and let go of what does not come to you. That is the path to happiness. - Mankutimma

Themes

MoralityDetachment

Video Section

Video Coming Soon

Detailed video explanations by scholars and experts will be available soon.