Mankutimmana Kagga by D.V. Gundappa
ಕಾಗೆಯುಂ ಕೋಗಿಲೆಯುಮೊಂದೆ ಮೇಲ್ನೋಟಕ್ಕೆ । ಯೋಗಿಯುಂ ಸಂಸಾರಭೋಗಿಯೇ ಹೊರಕೆ ॥ ಲೋಗರವೊಲಿರುತೆ ಸುಖದುಃಖಸಂಭ್ರಮಗಳಲಿ । ತ್ಯಾಗಿಯವನ್ ಆಂತರದಿ - ಮಂಕುತಿಮ್ಮ ॥ ೭೭೫ ॥
kAgeyum kOgileyum onde mElnOTakke । yOgiyum samsAra bhOgiyE horake ॥ lOgaravol irute sukha duHkha sambhramagaLali । tyAgi avan aantaradi - Mankutimma ॥ 775 ॥
ಕಾಗೆ ಮತ್ತು ಕೋಗಿಲೆಗಳು ಮೇಲು ನೋಟಕ್ಕೆ ಒಂದೇ ರೀತಿ ಕಾಣುತ್ತವೆ. ಯೋಗಿಯೂ ಹೊರನೋಟಕ್ಕೆ ಸಂಸಾರಿಯಂತೆ ಕಾಣುತ್ತಾನೆ. ಭೋಗಿಯಂತೆ ಕಾಣುತ್ತಾನೆ. ಆದರೆ ಅವನು ಲೋಕದ ಎಲ್ಲ ಜನರಂತೆ ಕಾಣುತ್ತಾ ಎಲ್ಲಾ ಸುಖ ದುಃಖ ಸಂಭ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಅಂತರಂಗದಲ್ಲಿ ತ್ಯಾಗಿಯಾಗಿರುತ್ತಾನೆ, ಎಂದು ತ್ಯಾಗಿಗಳ ಲಕ್ಷಣವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
For a plain sight, the crow and nightingale look similar. But they are very different in their qualities. Just like that, a Yogi (ascetic) may also look to be a normal person enjoying his stay in this world. He mingles with every one with their happiness, grief and jubilations. But inside he is noble person deeply and selflessly concerned about others on the world. - Mankutimma
Video Coming Soon
Detailed video explanations by scholars and experts will be available soon.