Back to List

Kagga 755 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮತಿಗರ್ಥವಾದೊಡೇಂ? ಸ್ಮೃತಿಯೊಳದು ನೆಲಸಿರಲಿ । ಸತತ ಸಂಧಾನದಲಿ ಪರಮಾರ್ಥವಿರಲಿ ॥ ಶತಲಕ್ಷಧನದ ಲೆಕ್ಕವ ಬಾಯಿ ನುಡಿದೊಡೇಂ? । ಭೃತಿಯೆಷ್ಟು ವೆಚ್ಚಕ್ಕೆ? - ಮಂಕುತಿಮ್ಮ ॥ ೭೫೫ ॥

matige arthavAdoDEm? smRutiyoLadu nelasirali । satata sandhAnadali paramArthavirali ॥ shatalakSha dhanada lekkava bAyi nuDidoDEm? । bhRutiyeShTu vecchakke? - Mankutimma ॥ 755 ॥

Meaning in Kannada

ಪರಮಾತ್ಮನ ವಿಚಾರ ಬುದ್ಧಿಗೆ ಅರ್ಥವಾದರೇನು? ಅದು ನೆನಪಿನಲ್ಲಿ ಉಳಿಯಬೇಕು. ಹಾಗೆ ಉಳಿದದ್ದು ಅಂತರಂಗದಲ್ಲಿ ಅನುಸಂಧಾನಗೊಳ್ಳಬೇಕು. ಬಾಯಿಯಲ್ಲಿ ಕೋಟಿ ಕೋಟಿ ಧನದ ಲೆಕ್ಕಾಚಾರ ಮಾಡಿದರೂ, ನಮ್ಮ ವೆಚ್ಚಕ್ಕೆ ನಮ್ಮ ಕಿಸೆಯಲ್ಲಿ ಉಳಿಯುವುದೆಷ್ಟು ಎನ್ನುವುದನ್ನು ನೋಡಬೇಕು ಎಂದು ಹೇಳಿ, ಪರಬ್ರಹ್ಮವಸ್ತುವು ನಮ್ಮ ಮನದಲ್ಲಿ ಗಟ್ಟಿಯಾಗಿ ಉಳಿಯಬೇಕೆನ್ನುವ ವಿಚಾರವನ್ನು ಮಂಡಿಸಿದ್ದಾರೆ ಈ ಮುಕ್ತಕದಲ್ಲಿ

Meaning & Interpretation

It is not enough if you just understand it. You must always remember it. In all your thoughts, there must be the presence of the ultimate truth. What is the use of a clerk (in a bank) talking about and keeping account of millions? At the end of the day he has to get only wages to meet his ends. - Mankutimma

Themes

WisdomDeath

Video Section

Video Coming Soon

Detailed video explanations by scholars and experts will be available soon.