Mankutimmana Kagga by D.V. Gundappa
ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ। ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ॥ ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ । ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ ॥ ೭೫೪ ॥
omme hUdOTadali, omme keLe kUTadali । omme sangeetadali, omme shaastradali ॥ omme samsaaradali, mattomme maunadali । brahmAnubhaviyAgo - Mankutimma ॥ 754 ॥
ಒಮ್ಮೆ ಹೂದೋಟದಲಿ ಸುತ್ತಾಡುವಾಗ, ಒಮ್ಮೆ ಗೆಳೆಯರೊಂದಿಗೆ ಸಮಯ ಕಳೆಯುವಾಗ, ಒಂದು ಸಂಗೀತ ಸಭೆಯಲ್ಲಿ ನಾದಗಳನಾಲಿಸುವಾಗ, ಸಂಸಾರದ ಸುಳಿಯಲ್ಲಿ ಸುತ್ತುವಾಗ ಅಥವಾ ಮೌನವಾಗಿರುವಾಗ ನೀನು ‘ ಪರ ಬ್ರಹ್ಮ’ ವಸ್ತುವಿನ ಅನುಭವನ್ನು ಪಡೆಯುತ್ತಾ ಇರು ಎಂದು ಒಂದು ಸೂಕ್ಷ್ಮ ವಿಚಾರವನ್ನು ನಮಗೆ ಅರುಹಿದ್ದಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ.
The creator is everywhere. Experience him sometimes in a flower gardern, sometimes in a friendsly get together, sometimes in music, sometimes in scriptures, sometimes in worldly dealings and sometimes in silence. - Mankutimma
Video Coming Soon
Detailed video explanations by scholars and experts will be available soon.