Mankutimmana Kagga by D.V. Gundappa
ಬ್ರಹ್ಮಾನುಸಂಧಾನ ಲೋಕಸಂಧಾನದಲಿ । ಬ್ರಹ್ಮದರ್ಶನವೆಲ್ಲ ಜೀವರೂಪದಲಿ ॥ ಬ್ರಹ್ಮಾನುಭವ ದೇಹಕರಣಾನುಭವಗಳಲಿ । ಮರ್ಮವಿದು ಮುಕ್ತಿಗೆಲೊ - ಮಂಕುತಿಮ್ಮ ॥ ೭೫೩ ॥
brahmAnusandhAna lOka sandhAnadali । brahma darshanavella jIvarUpadali ॥ brahma anubhava dEha karaNAnubhavagaLali । marmavidu muktigelo - Mankutimma ॥ 753 ॥
ಆ ಪರಮಾತ್ಮ ‘ ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು ಹೊಮ್ಮುವೆನು ಕೋಟಿರೂಪದಲಿ ನಾನೆಂದು( ಮುಕ್ತಕ ೭೪)" ಎಂದು ಈ ಜಗತ್ತಿನಲ್ಲಿ ಹಲವಾರು ರೂಪಗಳಲ್ಲಿ ಪ್ರಕಟವಾದನೆಂದು ಹೇಳುತ್ತಾ, ಈ ಲೋಕದಲ್ಲಿರುವುದೆಲ್ಲಾ ಬೇರೆಬೇರೆ ರೂಪಗಳನ್ನು ಧಾರಣೆಮಾಡಿದ ಆ ‘ ಪರಬ್ರಹ್ಮ’ ನೇ ಎನ್ನುತ್ತಾರೆ ಗುಂಡಪ್ಪನವರು. ಹಾಗಾಗಿ ಲೋಕವನ್ನು ಸರಿಯಾಗಿ ಅನುಸಂಧಾನಮಾಡಿದರೆ ಆ ಪರಬ್ರಹ್ಮನನ್ನು ಅನುಸಂಧಾನ ಮಾಡಿದಂತೆಯೇ. ಆ ಪರಬ್ರಹ್ಮಾನುಭಾವವನ್ನು ದೇಹವೆಂಬ ಸಾಧನದಿಂದಲೇ ಸಾಧಿಸಬೇಕು. ಇದೇ ‘ಮುಕ್ತಿಸಾಧನೆ’ ಯ ಮರ್ಮ ಎಂದು ಒಂದು ಗಹನವಾದ ತತ್ವವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು
Understand the brahman (God) by understanding his world. See the brahman in all beings He created. Experience the brahman through the senses. Salvation is possible through this path - experiencing the world (not by abandoning it). - Mankutimma
Video Coming Soon
Detailed video explanations by scholars and experts will be available soon.