Mankutimmana Kagga by D.V. Gundappa
ಭೋಜನದಿ ಪ್ರಮಭೋಜನ ಪರಬ್ರಹ್ಮರಸ । ಯಾಚಿಸಲ್ಕೇನಿರ್ಪುದದನುಂಡ ಬಳಿಕ? ॥ ತ್ಯಾಜಕ ತ್ಯಾಗ ಸಂತ್ಯಾಜ್ಯ ಭೇದಗಳಿರದೆ । ರಾಜ ನೀಂ ಜಗಕೆಲ್ಲ - ಮಂಕುತಿಮ್ಮ ॥ ೭೫೨ ॥
bhOjanadi parama bhOjana parabrahma rasa । yAchisalke Enirpudu adanunDa baLika? ॥ tyAjaka tyAga santyAjya bhEdagaLirade । rAja nIm jagakella - Mankutimma ॥ 752 ॥
ಭೋಜನಗಳಲ್ಲಿ ಅತ್ಯುತ್ತಮವಾದ ಭೋಜನ ಆ ‘ಪರಬ್ರಹ್ಮರಸಾಸ್ವಾದನೆ’. ಅದನ್ನು ಉಂಡ ಬಳಿಕ ಬೇರೇನೂ ಬೇಡಲಾಗುವುದಿಲ್ಲ. ಅದು ಸಂಪೂರ್ಣ ತೃಪ್ತಿಯನ್ನು ನೀಡುವಂತಹ ಊಟ. ಆ ಊಟವನ್ನುಣ್ಣುವಾಗ ಇದು ಬೇಕು, ಇದನ್ನು ಬಿಡಬಹುದು ಮತ್ತು ಇದು ಬೇಡ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಹಾಗೆ ಬೇಧವು ಅಳಿದ ಬಳಿಕ, ಎಲ್ಲ ಬೇಧಗಳನ್ನೂ ಮೆಟ್ಟಿ ನಿಂತ ಬಳಿಕ, ನೀನು ಜಗವನ್ನು ಗೆದ್ದ ರಾಜನ ಭಾವ ಸಿಗುತ್ತದೆ ಎಂದು ಪರಿಪೂರ್ಣ ಬದುಕಿನ ಸಾರ್ಥಕತೆಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Among all the foods, the best is the essence of the Parabrahman (God) himself. Once you have experienced it, then what is left in this world to ask for? People say that the way to realization is to lose attachment - letting go. If you have experienced God, then you will not find any difference among the person letting go, the act of letting go and the object being let go. You are the king of the world. - Mankutimma
Video Coming Soon
Detailed video explanations by scholars and experts will be available soon.