Back to List

Kagga 751 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಲೋಕವೆಲ್ಲವು ಚಿತ್ರವಿಂದ್ರಜಾಲದ ಕೃತ್ಯ । ಸಾಕೆನದೆ ಬೇಕೆನದೆ ನೋಡು ನೀನದನು ॥ ತಾಕಿಸದಿರಂತರಾತ್ಮಂಗಾವಿಚಿತ್ರವನು । ಹಾಕು ವೇಷವ ನೀನು - ಮಂಕುತಿಮ್ಮ ॥ ೭೫೧ ॥

lOkavu ellavu chitravu indrajAlada kRutya । sAkenade bEkenade nODu nInadanu ॥ tAkisadiru antarAtmange aa vichitravanu । hAku vEShava nInu - Mankutimma ॥ 751 ॥

Meaning in Kannada

ಇಡೀ ಜಗತ್ತು ಒಂದು ವಿಚಿತ್ರ ಇಂದ್ರಜಾಲದ ಕಾರ್ಯದಂತೆ, ಮಾಯೆಯಿಂದ ಕೂಡಿ ಇದೆ. ಇದು ಸಾಕು ಅಥವಾ ಇದು ಬೇಕು ಎನದೆ ಕೇವಲ ಸಾಕ್ಷಿಯಂತೆ ಇದನ್ನು ನೋಡು. ಇದರ ವಿಚಿತ್ರಗಳನ್ನು ನಿನ್ನ ಅಂತರಾತ್ಮಕ್ಕೆ ಅಂಟಿಸಿಕೊಳ್ಳಬೇಡ. ನಾಟಕದ ಪಾತ್ರದಾರಿಯಂತೆ ನಿನ್ನ ಜೀವನವನ್ನು ನಡೆಸು ಎಂದು, ನಾವು ಬದುಕಿನಲ್ಲಿ ಧರಿಸಿರುವ ಪಾತ್ರವನ್ನು ಹೇಗೆ ನಿಭಾಯಿಸಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

The whole world is an illusion created by magic. You are a part of it. Watch it without asking for more, or wanting it to stop. Don't let your soul develop any attachment towards it. You must play your part (and leave). - Mankutimma

Themes

LifeDetachmentWar

Video Section

Video Coming Soon

Detailed video explanations by scholars and experts will be available soon.