Mankutimmana Kagga by D.V. Gundappa
ಮುಳುಗದಿರು; ಜೀವನದ ತೆರೆಯ ಮೇಲೀಜುತಿರು । ಒಳಿತನಾಗಿಸು, ಕೊಡುತ ಕೊಳುತ ಸಂತಸವ ॥ ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು । ಮಿಳಿತನಿರು ವಿಶ್ವದಲಿ - ಮಂಕುತಿಮ್ಮ ॥ ೭೫೦ ॥
muLugadiru; jIvanada tereya mEle eejutiru । oLitanAgisu, koDuta koLuta santasava ॥ kaLavaLaMbaDade naDe kaDeya kare bandandu । miLitaniru vishvadali - Mankutimma ॥ 750 ॥
ಬದುಕಿನಲ್ಲಿ ಮುಳುಗಿಬಿಡಬೇಡ. ನದಿಯ ತೆರೆಯಮೇಲೆಯೇ ಈಜುತ್ತಿರುವಂತೆ ಜೀವನದಲ್ಲಿ ಅಂಟೀ ಅಂಟದಹಾಗೆ ಇರು. ಜಗತ್ತಿನಲ್ಲಿ ಅನ್ಯರಿಗೆ ಕೊಡುತ್ತಾ ಮತ್ತು ಅನ್ಯರಿಂದ ಪಡೆದುಕೊಳ್ಳುತ್ತಾ, ಸದಾಕಾಲ ಒಳಿತನ್ನೇ ಮಾಡುತ್ತಿರು. ಕಡೆಗೆ ಅಂತಕನ ಕರೆಬಂದಾಗ ಕಳವಳಪಡದೆ, ಗೊಣಗಾಡದೆ ಎಲ್ಲವನ್ನೂ ಬಿಟ್ಟು ಹೊರಡು. ಈ ಜಗತ್ತಿನಲ್ಲಿ ಸೇರಿದಂತೆ ಇರು ಎಂದು ನಿರ್ಲಿಪ್ತತೆಯಿಂದ ಬದುಕಿದರೂ ಜಗತ್ತಿಗೆ ಉಪಯುಕ್ತನಾಗಿ ಬದುಕುವ ದಾರಿಯನ್ನು ತೋರಿದ್ದಾರೆ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
Try to stay afloat and swim through the tides of life. Don't drown. Do good to others - give and take happiness. Don't get anxious when the final comes. Just leave everything and go. Try to mingle well in the world. - Mankutimma
Video Coming Soon
Detailed video explanations by scholars and experts will be available soon.