Back to List

Kagga 756 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸಾರ್ವಭೌಮತೆ ನಾಲ್ಕು ಗುಣಕೆ ಗುಣರಾಜ್ಯದಲಿ । ಧೈರ್ಯ ಮೊದಲಿನದೆರಡನೆಯದು ಮತಿಯೋಜೆ ॥ ಸರ್ವದಯೆ ಮೂರನೆಯದದುವೆ ನೀತಿಯ ಮೂಲ । ನಿರ್ಮಮತ್ವವೆ ಮುಕುಟ - ಮಂಕುತಿಮ್ಮ ॥ ೭೫೬ ॥

sArvabhaumate nAlku guNake guNarAjyadali । dhairya modalinadu eraDaneyadu matiyOje ॥ sarvadaye mUraneyadaduve nItiya mUla । nirmamatvave mukuTa - Mankutimma ॥ 756 ॥

Meaning in Kannada

ಗುಣಗಳಲ್ಲಿ ನಾಲ್ಕು ಗುಣಗಳು ಅತ್ಯುತ್ತಮ ಗುಣಗಳು. ಮೊದಲನೆಯದು ಧೈರ್ಯ, ಎರಡನೆಯದು ಬುದ್ಧಿಯ ಶಕ್ತಿ, ನೀತಿಯ ಮೂಲವಾದ ಸರ್ವರಲ್ಲೂ ದಯಾಗುಣ ಮೂರನೆಯದು ಮತ್ತು ಮಿಕ್ಕೆಲ್ಲಕ್ಕೂ ಕಿರೀಟಪ್ರಾಯವಾಗಿರುವುದು, ನಿರ್ಮಮತೆ ನಾಲ್ಕನೆಯ ಗುಣ ಎಂದು ಆತ್ಮೋದ್ಧಾರಕ್ಕೆ ಮನುಷ್ಯನಲ್ಲಿ ಇರಬೇಕಾದ ಗುಣಲಕ್ಷಣಗಳನ್ನೂ ನಮಗೆ ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

In the kingdom of qualities, there are four qualities that are the best. Courage is the first. Second is wisdom that lets you choose the right over wrong. Having compassion towards all is the third which is the root of all morality. Dispassionate attachment is the fourth and the best of them all. - Mankutimma

Themes

WisdomMoralityDetachmentLoveWar

Video Section

Video Coming Soon

Detailed video explanations by scholars and experts will be available soon.