Back to List

Kagga 747 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ । ಅವರೆಷ್ಟು ಯಶವಂತರ್ ಎನುವ ಕರುಬಿನಲಿ ॥ ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು । ಶಿವನಿಗೆ ಕೃತಜ್ಞತೆಯೆ? - ಮಂಕುತಿಮ್ಮ ॥ ೭೪೭ ॥

avareShTu dhanavantar, ivareShTu balavantar । avareShTu yashavantar enuva karubinali ॥ bhavika ninageShTihudo maretu nIm koraguvudu । shivanige kRutajnateye? - Mankutimma ॥ 747 ॥

Meaning in Kannada

ಅವರಿಗೆಷ್ಟು ಧನವಿದೆ, ಇವರಿಗೆಷ್ಟು ಬಲವಿದೆ ಮತ್ತು ಅವರೆಷ್ಟು ಯಶಸ್ವೀ ಜನ ಎಂದು ಅನ್ಯರ ಕಂಡು ಕೊರಗುವುದರಲ್ಲಿ ನಿನ್ನ ಬಳಿ ಏನಿಹುದು ಎಂದು ನೀನು ಮರೆತು ಹೋದರೆ ಅದು ಆ ಪರಮಾತ್ಮನಿಗೆ ಕೃತಜ್ಞತೆ ತೋರಿದಂತೆ ಆಗುತ್ತದೆಯೇ? ಎಂದು ಒಂದು ತಾತ್ವಿಕ ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

How rich are they? How powerful are they? How famous are they? Man has only such thoughts about others. There is a whole lot of possessions that he has an enjoys. But he forgets them all and concentrates only on what others have. Is this how we show thankfulness to God (Lord Shiva)? - Mankutimma

Themes

DevotionSociety

Video Section

Video Coming Soon

Detailed video explanations by scholars and experts will be available soon.