Back to List

Kagga 746 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನೆರಳನಿನಿತನು ಕೊಡುವ, ದಣಿವನಿನಿತನು ಕಳೆವ । ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ॥ ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ । ಪರಮಧರ್ಮವದೆಲವೊ - ಮಂಕುತಿಮ್ಮ ॥ ೭೪೬ ॥

neraLan initanu koDuva, daNivan initanu kaLeva । tireya payaNada horeyan initu suLuvenipa aa ॥ taruvAgi maneyoLago horago nIm beLeyutire । parama dharmavadu elavo - Mankutimma ॥ 746 ॥

Meaning in Kannada

ಕೊಂಚ ನೆರಳನ್ನು ಕೊಡುವ, ಅದರಡಿ ಕುಳಿತಾಗ ದಣಿವಾರುವ, ಸುತ್ತಾಟದ ಆಯಾಸದ ಭಾರ ಸ್ವಲ್ಪ ಹಗುರಾಗಿಸುವಂತಹ ಒಂದು ‘ಮರ’ ವನ್ನು, ನೀನು ಮನೆಯ ಒಳಗೋ ಅಥವಾ ಹೊರಗೋ ಬೆಳೆಸಿದರೆ ಅದೇ ಪರಮ ಧರ್ಮವು ಎಂದು ನಿಸ್ವಾರ್ಥದಿಂದ ಪರರಿಗೊದಗುವ ಮರ ಮತ್ತು ಅದನ್ನು ಬೆಳೆಸುವ ಪುರುಷಾರ್ಥವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

It gives a little shade when it is hot. It gives relief when you are tired. It makes the journey on this earth a little more manageable. If we can be like that tree inside or outside our houses, then it is akin to following the best Dharma. - Mankutimma

Themes

LifeMoralityNature

Video Section

Video Coming Soon

Detailed video explanations by scholars and experts will be available soon.