Mankutimmana Kagga by D.V. Gundappa
ಪರಹಿತದ ಮಾತಿರಲಿ; ಪರರಿನೇ ಜೀವಿಪನು । ನರಜಂತು, ಪಶು ಪಕ್ಷಿ ಕೀಟ ಮೀನ್ಗಳವೋಲ್ ॥ ಪರರಿನೆಳಸದದೇನನುಂ ಪರರಿಗುಪಕರಿಪ । ತರುಜನ್ಮವಲ ಪುಣ್ಯ! - ಮಂಕುತಿಮ್ಮ ॥ ೭೪೫ ॥
parahitada mAtirali; pararinE jIvipanu । narajantu, pashu pakShi kITa mIngaLa vOl ॥ pararina eLasadu Enanum pararige upakaripa । tarujanmavala puNya - Mankutimma ॥ 745 ॥
ಪರರಿಗೆ ಉಪಕಾರ ಮಾಡುವ ಮಾತು ಒತ್ತಟ್ಟಿಗೆ ಇರಲಿ, ಮನುಷ್ಯ ಸದಾಕಾಲ, ಪಶು ಪಕ್ಷಿ ಕೀಟ ಮೀನುಗಳಂತೆ ಪರರಮೇಲೆ ಅಧಾರಪಡುತ್ತಲೇ ಜೀವಿಸುತ್ತಾನೆ. ಪರರಿಂದ ಏನನ್ನೂ ಬಯಸದೆ ಅನ್ಯರಿಗುಪಕರಿಸುವ ಮರದ ಜನ್ಮ ಶ್ರೇಷ್ಠ ಎಂದು ನಿರಾಧಾರವಾದ ಬದುಕಿನ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.
Let us set aside the concept of 'helping others'. These trees seem to entirely live for the benefit of others - man, animals, birds, worms and fishes. They do not expect any help from others. They always help others. Truly, trees must be accumulating a lot of good karma. - Mankutimma
Video Coming Soon
Detailed video explanations by scholars and experts will be available soon.