Mankutimmana Kagga by D.V. Gundappa
ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್ । ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ॥ ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ । ಜೀರ್ಣಿಸದ ಋಣಶೇಷ - ಮಂಕುತಿಮ್ಮ ॥ ೭೪೮ ॥
anna uNuvandu kEL: adanu bEyisida nIr । ninna duDitada bemaro, perara kaNNIrO? ॥ tinnu nIm jagake tinal ittanita; mikka ooTa । jIrNisada RuNashESha - Mankutimma ॥ 748 ॥
ನೀನು ತಿನ್ನುವ ಅನ್ನವನ್ನು ಬೇಯಿಸಿದ ನೀರು ನಿನ್ನ ದುಡಿಮೆಯಿಂದ ಪಡೆದದ್ದೋ ಅಥವಾ ಪರರನ್ನು ಪೀಡಿಸಿ ಪಡೆದದ್ದೋ ಎಂದು ನೀನು ಊಟಮಾಡುವಾಗ, ನಿನ್ನನ್ನೇ ನೀನು ಕೇಳಿಕೋ. ಜಗತ್ತಿಗೆ ನೀನು ಎಷ್ಟು ಕೊಟ್ಟಿರುತ್ತೀಯೋ ಅಷ್ಟನ್ನು ಮಾತ್ರ ಪಡೆದು ನೀನು ಉಣ್ಣು. ಅದಕ್ಕಿಂತ ಅಧಿಕವಾಗಿ ಪಡೆದು ಉಂಡರೆ ಅದು ನಿನ್ನೊಳಗೆ ಜೀರ್ಣವಾಗದೇ, ಅನ್ಯರಿಗೆ ಹಿಂತಿರುಗಿಸಲೇಬೇಕಾದ ಋಣವಾಗಿ ಉಳಿದುಬಿಡುತ್ತದೆ ಎಂದು, ಜಗತ್ತಿನಲ್ಲಿ ನಾವು ಅನುಭವಿಸುವುದೆಲ್ಲವನ್ನೂ ನಮ್ಮದೇ ಕಷ್ಟಾರ್ಜಿತವಾಗಿರಬೇಕೆಂದೂ ಅನ್ಯರಿಂದ ಪಡೆದದ್ದು ನಮಗೆ ದಕ್ಕುವುದಿಲ್ಲವೆಂದೂ ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
When you sit to eat, ask yourself if the water that was used came from your sweat (hardwork) or from other people's tears (tyranny). You must eat only that much which you have given to the world. Any amount more will be counted as un-recovered debt. - Mankutimma
Video Coming Soon
Detailed video explanations by scholars and experts will be available soon.