Mankutimmana Kagga by D.V. Gundappa
ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು । ಬಳುಕು ಹಗ್ಗದ ಮೇಲೆ ತಾನಡಿಯನಿಡುತ ॥ ಕೆಲ ಬಲಕೆ ಬೀಳದೆ ಮುನ್ನೆಡೆವ ಡೊಂಬನುಪಾಯ । ಕಲೆಯೆ ಜೀವನಯೋಗ - ಮಂಕುತಿಮ್ಮ ॥ ೭೪೧ ॥
tale koDava taLediralu, kai katti piDidiralu । baLuku haggada mEle tAnu adiyanu iDuta ॥ kela balake bILade munneDeva Dombana upAya । kaleye jIvana yOga - Mankutimma ॥ 741 ॥
ತಲೆಯಮೇಲೆ ಕೊಡವನ್ನು ಹೊತ್ತು, ಕೈಯಲ್ಲಿ ಕತ್ತಿಯನ್ನು ಹಿಡಿದು, ಓಲಾಡುವ ಹಗ್ಗದಮೇಲೆ ತಾನು ಅಡಿಯನ್ನು ಇಡುತ್ತಾ, ಎಡಬಲಗಳಿಗೆ ಬಾಗುತ್ತಾ ತೂಗುತ್ತಾ ಕೆಳಗೆ ಬೀಳದೆ, ದೊಂಬರಾಟದವ ತನ್ನ ಆಟವನ್ನು ತೋರುವ ಕಲೆಯಂತೆಯೇ, ಜೀವನದ ಕಲೆಯೂ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
A circus artiste shows us the most important lesson of life. He walks over tight shaky rope with pot on his head and sword in his hand. He is able to move forward without falling down or to his side. He is able to attain the balance in spite of all the noise around him. His art of concentrating on the balance and filtering everything else out is the key to happiness in life. - Mankutimma
Video Coming Soon
Detailed video explanations by scholars and experts will be available soon.