Mankutimmana Kagga by D.V. Gundappa
ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? । ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ॥ ಆವುದೋ ಕುಶಲತೆಯದೊಂದಿರದೆ ಜಯವಿರದು । ಆ ವಿವರ ನಿನ್ನೊಳಗೆ - ಮಂಕುತಿಮ್ಮ ॥ ೭೪೦ ॥
jIvanavu adondu kale; kaleya kalisuvudentu? । sAvirada niyama yuktigaLanu oredoDeyum ॥ Avido kushalateyu adondirade jayaviradu । aa vivara ninnoLage - Mankutimma ॥ 740 ॥
ಬದುಕುವುದು ಒಂದು ಕಲೆ. ಆದರೆ ಆ ಕಲೆಯನ್ನು ಕಲಿಸುವುದು ಹೇಗೆ? ಸಾವಿರಾರು ನಿಯಮಗಳು, ಸೂತ್ರಗಳು, ಯುಕ್ತಿಗಳನ್ನು ಪಾಠ ಹೇಳಿ ಕೊಟ್ಟಂತೆ ಕಲಿಸಿದರೂ, ಅಂತರಂಗದ ಕುಶಲತೆ ಇಲ್ಲದಿದ್ದರೆ ಬದುಕಿನಲ್ಲಿ ಜಯವಿರುವುದಿಲ್ಲ. ಆ ಕುಶಲತೆಯ ವಿವರವನ್ನು ನೀನು ನಿನ್ನೊಳಗೇ ಕಂಡುಕೋ ಎಂದು ಬದುಕಿನ ಜಯಕ್ಕೆ ಒಂದು ಮಾರ್ಗ ತೋರಿದ್ದಾರೆ ಈ ಮುಕ್ತಕದಲ್ಲಿ.
Succeeding in life is an art. But who can teach the art? There are thousands of rules and tactics that one can master. But victory eludes you unless you have that one special skill. Details of that skill is available only to you - within you. - Mankutimma
Video Coming Soon
Detailed video explanations by scholars and experts will be available soon.