Mankutimmana Kagga by D.V. Gundappa
ತನ್ನ ಮನದಾಟಗಳ ತಾನೆ ನೋಡುತ ನಗುವ । ತನ್ನೊಳಗೆ ತಾನಿರ್ವರಾದವೊಲು ಬಾಳ್ವ ॥ ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ । ಧನ್ಯತೆಯ ಕಂಡವನು - ಮಂಕುತಿಮ್ಮ ॥ ೭೩೯ ॥
tanna manadATagaLa tAne nODuta naguva । tannoLage tAnu irvaraadavolu bALva ॥ chinmAtravanu bEre bagedu jAnipa chatura । dhanyate kanDavanu - Mankutimma ॥ 739 ॥
ತನ್ನ ಮನದೊಳಗೆ ನಡೆಯುವ ಇಂದ್ರಿಯ ಪ್ರಚೋದಿತ ಆಟವನ್ನು ತಾನೇ ನೋಡುತ್ತಾ, "ಮಾಡುವವನು ಬೇರೆ ಮತ್ತು ನೋಡುವವನು ಬೇರೆ" ಎಂಬಂತೆ ತನ್ನ ಕರ್ಮಗಳನ್ನು ತಾನೇ ಸಾಕ್ಷೀ ರೂಪದಲ್ಲಿ ನೋಡಲು ಮತ್ತು ‘ತಾನು ಆತ್ಮ’ ಎಂಬ ಅರಿವು ಮೂಡಿ ಆ ಅರಿವಿನಲ್ಲಿ ಧ್ಯಾನಸ್ಥನಾಗಬಲ್ಲವನೇ ಚತುರ ಮತ್ತು ಅವನ ಬದುಕೇ ಧನ್ಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
He is a wise, content and realized man who can see himself as two people and live like that. One of them is under the control of the mind and chasing the worldly existence. While the other is knows it is all futile and observes (with a smile) his mind detached just as it would observe the rest of the world. - Mankutimma
Video Coming Soon
Detailed video explanations by scholars and experts will be available soon.