Mankutimmana Kagga by D.V. Gundappa
ತನಗೆ ಬಾರದ ಲಾಭ ತನಯಂಗೆ ಬಂದಾಗ । ಜನಕನ್ ಅದು ತನದೆಂದು ಸಂತಸಿಪ ತೆರದಿ ॥ ಜನದೊಳಾರ್ಗಾವ ಸೊಗವಾದೊಡಂ ತನದೆನ್ನು- । ತನುಭವಿಪನೋ ಜ್ಞಾನಿ - ಮಂಕುತಿಮ್ಮ ॥ ೭೩೮ ॥
tanage bArada lAbha tanayange bandAga । janakan adu tanadendu santasipa teradi ॥ janadoL aarge aava sogavAdoDam tanadennuta । anubhavipanO jnAni - Mankutimma ॥ 738 ॥
ಜೀವನದಲ್ಲಿ ನಾನು ಪಡೆಯಲಾಗದ್ದನ್ನು ನನ್ನ ಮಗ(ಳು)ಪಡೆದರೆ ಸಂತೋಷಿಸುವ ತಂದೆಯಂತೆ, ಜಗತ್ತಿನಲ್ಲಿ, ನಾವು ಬಯಸಿ, ನಮಗೆ ಸಿಗದಿದ್ದದ್ದು ಬೇರೆ ಯಾರಿಗಾದರೂ ದಕ್ಕಿ ಅದು ಅವರ ಸಂತೋಷಕ್ಕೆ ಕಾರಣವಾದರೆ ಆ ಸಂತೋಷವನ್ನು ತನ್ನ ಸಂತೋಷವೆಂದು ಸಂಭ್ರಮಿಸುವವನೆ ಜ್ಞಾನಿ ಎಂದು ಉಲ್ಲೇಖಮಾಡಿದ್ದಾರೆ ಈ ಮುಕ್ತಕದಲ್ಲಿ.
If a father misses a fortune and sees his son get it, he will rejoice it just as much. A wise man will do just the same for any joy experienced by any one in this world. That is the secret of his happiness. - Mankutimma
Video Coming Soon
Detailed video explanations by scholars and experts will be available soon.