Back to List

Kagga 742 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ । ವಹಿಸೆ ಜೀವನಭರವನದು ಹಗುರೆನಿಪವೊಲ್ ॥ ಸಹನೆ ಸಮರಸಭಾವವಂತಃಪರೀಕ್ಷೆಗಳು । ವಿಹಿತವಾತ್ಮದ ಹಿತಕೆ - ಮಂಕುತಿಮ್ಮ ॥ ೭೪೨ ॥

bahu vidye bahu tarka bahunEma bEkilla । vahise jIvanabharavanu adu hagurenipavol ॥ sahane samarasabhAvavu antaH parIkShegaLu । vihitavu aatmada hitake - Mankutimma ॥ 742 ॥

Meaning in Kannada

ಬದುಕಿನ ಭಾರ ‘ಹಗುರ’ ವೆಂಬಂತೆ ಹೊರಲು, ಬಹು ವಿದ್ಯೆಗಳ ಪಾಂಡಿತ್ಯ, ಅತಿಯಾದ ತರ್ಕ ಮತ್ತು ಕಠೋರ ವ್ರತ ನಿಯಮಗಳ ಪಾಲನೆ ಅನಗತ್ಯ. ತಾಳ್ಮೆ, ಸಮಭಾವ ಮತ್ತು ಅಂತರಂಗದಲ್ಲಿ ವಿಚಾರ ಮಂಥನಗಳಾದರೆ ಸಾಕು, ಆತ್ಮಕ್ಕೆ ಹಿತವಾಗುವುದಕ್ಕೆ ಎಂದು ಸರಳವಾಗಿ, ಆನಂದವಾಗಿ ಬದುಕುವ ದಾರಿಯ ಸೂತ್ರವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

You don't need very sophisticated education, or grand logic, or elaborate rituals to make the burden of life lighter. What you need is patience, a common view of entire world and critical introspection. These are all good for the soul. - Mankutimma

Themes

LifeMoralitySelf

Video Section

Video Coming Soon

Detailed video explanations by scholars and experts will be available soon.