Back to List

Kagga 735 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ । ಆಯವದರಿಂ ಭಟನ ಸತ್ತ್ವಶಿಕ್ಷಣಕೆ ॥ ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ । ಶ್ರೇಯಸಿಗೆ ಸೋಪಾನ - ಮಂಕುತಿಮ್ಮ ॥ ೭೩೫ ॥

nAyakanigirali raNavijaya paribhava gaNane । aayavu adarim bhaTana sattva shikShaNake ॥ svIya sattvavikAsa nija shaktiyabhyAsa । shrEyasige sOpAna - Mankutimma ॥ 735 ॥

Meaning in Kannada

ಯುದ್ಧದಲ್ಲಿ ಹೋರಾಡುವ ಸೈನಿಕನಿಗೆ, ರಣರಂಗವು, ಕಲಿಕೆಗೆ ಮತ್ತು ಸತ್ವವರ್ಧನೆಗೆ ಒಂದು ಸೂಕ್ತ ಸ್ಥಳ(ಆಯ). ಆ ರಣದ ಸೋಲುಗೆಲುವಿನ ಲೆಕ್ಕಾಚಾರ ಆ ರಣದ ನಾಯಕನಿಗಿರಲಿ ಎಂದು ಹೇಳುತ್ತಾ ಬದುಕಿನ ಹೋರಾಟವನ್ನೂ ಸಹ ಸೋಲುಗೆಲುವುಗಳ ಚಿಂತೆಯಿಲ್ಲದೆ ಹೋರಾಡಿ, ನಮ್ಮ ಅನುಭವದಿಂದ ಅಂತಃಸತ್ವವನ್ನು ವರ್ಧಿಸಿಕೊಳ್ಳಬೇಕು, ಅದೇ ವ್ಯಕ್ತಿಯ ಶ್ರೇಯಸ್ಸಿಗೆ ಮೆಟ್ಟಿಲು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Let the worry of keeping counts of victories and defeat be left to the leader (God). The only outcome of the process should be your training for the battle. The practice alone is good enough outcome and it will lead to enrichment of your life. - Mankutimma

Themes

DevotionLifeMoralitySufferingWar

Video Section

Video Coming Soon

Detailed video explanations by scholars and experts will be available soon.