Back to List

Kagga 734 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸೈನಕನು ನೀನು, ಸೇನಾಧಿಪತಿಯೆಲ್ಲಿಹನೊ! । ಆಣತಿಯ ಕಳುಹುತಿಹನದನು ನೀನರಿತು ॥ ಜಾಣಿನಧಟಿಂ ಪೋರು; ಸೋಲುಗೆಲುವವನೆಣಿಕೆ । ಕಾಣಿಸದನಾಳ್ಕೆಯದು - ಮಂಕುತಿಮ್ಮ ॥ ೭೩೪ ॥

sainikanu ninu, sEnAdhipatiyu ellihano! । aaNatiya kaLuhitihanu adanu nInaritu ॥ jANinadhaTim pOru; sOlu geluvu avaneNike । kANisadana ALkeyadu - Mankutimma ॥ 734 ॥

Meaning in Kannada

ಈ ಜಗತ್ತಿನ ಬದುಕೇ ಒಂದು ರಣರಂಗ. ಅದರಲ್ಲಿ ನೀನೊಬ್ಬ ಯೋಧ. ನಿನಗೆ ಆಜ್ಞೆಗಳನ್ನೀವ ಸೇನಾಧಿಪತಿಯು ಎಲ್ಲಿಹನೋ ನೀನರಿಯೆ. ಅವನಿರುವಲ್ಲಿಂದಲೇ ತನ್ನ ಆಜ್ಞೆಗಳನ್ನು ಹೊರಡಿಸುತ್ತಾನೆ. ಆ ಆಜ್ಞೆಗಳನ್ನು ಅರ್ಥಮಾಡಿಕೊಂಡು, ಜಾಣತನ ಮತ್ತು ಪರಾಕ್ರಮದಿಂದ ಹೋರಾಡುವುದಷ್ಟೇ ನಿನ್ನ ಕರ್ತವ್ಯ. ಹೋರಾಟದಲ್ಲಾಗುವ ‘ಜಯಾಪಜಯ’ಗಳ ಲೆಕ್ಕಾಚಾರ ಅವನಿಗೆ ಸೇರಿದ್ದು. ನಮ್ಮ ಕಣ್ಣಿಗೆ ಕಾಣಿಸದ ಅವನ, ಆಳ್ವಿಕೆ ಇದು, ಎಂದು ಹೇಳುತ್ತಾ ಬಂಧನವಿಲ್ಲದೆ, ಅಂಟದೆ ನಮ್ಮ ಕರ್ತವ್ಯ ಪಾಲನೆಯ ಪರಿಯನ್ನು ನಮಗುಪದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

You are a soldier. We don't know where the commander is! He is sending instructions. We have to understand and execute the orders wisely and courageously. Victory or defeat is not ours, but his. Life is the rule of the invisible commander. - Mankutimma

Themes

WisdomLifeDeath

Video Section

Video Coming Soon

Detailed video explanations by scholars and experts will be available soon.