Back to List

Kagga 733 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು । ಭೂವಿಷಯದಿಂದ ರಸ ಮಾರ್ಪಡುವುದುಂಟು ॥ ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ । ಸೇವಕನು ನೀನಲ್ತೆ? - ಮಂಕುತಿಮ್ಮ ॥ ೭೩೩ ॥

mAvu sasiyanu neTTu bEvu uNalu siddhaniru । bhUviShayadinda rasa mArpaDuvudunTu ॥ A vivara ninagEke? tOTada oDeyanigirali । sEvakanu nInalte? - Mankutimma ॥ 733 ॥

Meaning in Kannada

ಮಾವಿನ ಸಸಿಯನ್ನು ನೆಟ್ಟು ಬೇವಿನ ಹಣ್ಣನ್ನು ತಿನ್ನಲು ನೀನು ಸಿದ್ಧನಾಗಿರು. ಭೂಮಿಯಲ್ಲಿನ ರಸಗಳು ಬದಲಾಗುವುದುಂಟು. ಅವು ಹೇಗೆ ಬದಲಾಗುತ್ತವೆ ಎನ್ನುವುದನ್ನು ಯೋಚಿಸಲು, ತರ್ಕಿಸಲು ನೀನು ಅರ್ಹನಲ್ಲ. ಆ ವಿವರಗಳು ನಿನಗೆ ಬೇಡ. ಆ ವಿವರಗಳನ್ನು ತೋಟದ ಒಡೆಯ ತಾ ನೋಡಿಕೊಳ್ಳುವನು. ನೀನು ಈ ತೋಟದಲ್ಲಿ ಕೇವಲ ಒಬ್ಬ ಸೇವಕ ಎಂದು ಬದುಕಿನಲ್ಲಿ ನಮ್ಮೊಡನೆ ನಡೆಯುವ ವಿದ್ಯಮಾನಗಳ ವೈಪರೀತ್ಯವನ್ನು ವಿವರಿಸಿ ನಾವು ಈ ಬದುಕಿನಲ್ಲಿ ಹೇಗಿರಬೇಕು ಎನ್ನುವುದನ್ನು ನಮಗರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

You may plant a mango (sweet) sapling and grow it. But you must be prepared to eat neem (bitter). The nourishment it receives from earth sometimes has the ability to change the basic nature of the plant itself. But why should you bother with that process. Let the owner of the garden (Creator) worry about that. Aren't you a mere servant taking care of the garden? - Mankutimma

Themes

SufferingNatureSelfLove

Video Section

Video Coming Soon

Detailed video explanations by scholars and experts will be available soon.