Mankutimmana Kagga by D.V. Gundappa
ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ । ಆವಾಗಳಾವಕಡೆಗೆರಗುವುದೊ ಹಕ್ಕಿ! ॥ ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ । ಜೀವಮಾರ್ಗವನೂಹ್ಯ - ಮಂಕುತಿಮ್ಮ ॥ ೭೩೨ ॥
aava kaDe hAruvudo! aava kaDe tiruguvudo । aavAgaL aavakaDege eraguvodo hakki! ॥ nAvum anteye sRuShTi kRutrimada kaigombe । jIva mArgavu anUhya - Mankutimma ॥ 732 ॥
ಗಗನದಲ್ಲಿ ಹಾರುವ ಹಕ್ಕಿ ಯಾವ ಕಡೆಗೆ ಹಾರುವುದೋ, ಯಾವ ಕಡೆಗೆ ತಿರುಗುವುದೋ ಗೊತ್ತಾಗುವುದಿಲ್ಲ. ಹಾಗೆ ಹಾರುವಾಗ ಯಾವ ಸಮಯಕ್ಕೆ ಗಕ್ಕೆಂದು ಎರಗಿ ಎಲ್ಲಿ ಇಳಿಯುವುದೋ ಎಂಬುದೂ ಸಹ ಗೊತ್ತಾಗುವುದಿಲ್ಲ. ಅಂತೆಯೇ ಮನುಷ್ಯರ ಬದುಕೂ ಸಹ. ನಾವೆಲ್ಲರೂ ಈ ಪ್ರಕೃತಿಯ ಕೈ ಗೊಂಬೆಗಳು. ಆ ವಿಧಿಯಾಡಿಸಿದಂತೆ ಆಡಬೇಕಾದ ಗೊಂಬೆಗಳು. ನಮಗೆ ನಮ್ಮ ಜೀವನದ ಮಾರ್ಗವು, ಪಯಣದ ಗತಿಯು ಊಹಿಸಲು ಸಾಧ್ಯವಿಲ್ಲ ಎಂದು ಬದುಕಿನ ವಾಸ್ತವಿಕತೆಯನ್ನು ಅರುಹಿದ್ದಾರೆ, ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
One can not say which way the bird would fly. when it would turn, at what instant would it take off. Even the bird may not be able to tell. We are also like that. We are puppets in the hands of the illusion of creation. Life can never be certain. - Mankutimma
Video Coming Soon
Detailed video explanations by scholars and experts will be available soon.