Back to List

Kagga 731 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು । ಏನನೋ ನೆನೆದು ಸರ್ರೆಂದು ಹಾರುವುದು ॥ ಬಾನೊಳಾಡುವ ಹಕ್ಕಿಗದುವೆ ನಿತ್ಯಾನುಭವ । ನೀನದನು ಮೀರಿಹೆಯ? - ಮಂಕುತಿಮ್ಮ ॥ ೭೩೧ ॥

Eno kaNNanu piDiyuvudu Eno digilAgipudu । EnanO nenedu sarrendu hAruvudu ॥ bAnoLADuva hakkige aduve nityAnubhava । nInadanu mIriheya? - Mankutimma ॥ 731 ॥

Meaning in Kannada

ಆಕಾಶದಲ್ಲಿ ಹಾರುವ ಹಕ್ಕಿಗೆ ಯಾವುದೋ ಒಂದು ವಸ್ತು ಇಷ್ಟವಾಗುತ್ತದೆ ಅಥವಾ ಮತ್ಯಾವುದನ್ನೋ ನೋಡಿ ಅದು ಹೆದರುತ್ತದೆ, ಮತ್ತೊಂದು ಕ್ಷಣಕ್ಕೆ ಏನನ್ನೋ ನೆನೆದು ಅದು ಪುರ್ರೆಂದು ಹಾರಿಹೋಗುತ್ತದೆ. ಹಕ್ಕಿಗೆ ಇದು ನಿತ್ಯ ಆಗುವ ಅನುಭವ. "ನಿನ್ನ ಬದುಕು ಈ ಪರಿಯನ್ನು ಮೀರಿಹುದೇನು?" ಎಂದು ಪ್ರಶ್ನಾರೂಪದಲ್ಲಿ ನಮಗೆ ನಮ್ಮ ಬದುಕೂ ಸಹ ಹಾರುವ ಹಕ್ಕಿಯ ಬದುಕಿಗಿಂತ ಭಿನ್ನವಲ್ಲ ಎಂದು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

The eye catches something interesting. It sees something and gets scared. It remembers something else and just takes off. These are the everyday experience of a bird flying in the open sky. Do you think your experiences are any better? - Mankutimma

Themes

LifeNatureLovePeace

Video Section

Video Coming Soon

Detailed video explanations by scholars and experts will be available soon.