Mankutimmana Kagga by D.V. Gundappa
ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? । ಇಕ್ಕುವರದಾರದನು ಕರೆದು ತಿರುಪೆಯನು? ॥ ರೆಕ್ಕೆ ಪೋದಂತಲೆದು, ಸಿಕ್ಕಿದನುಣ್ಣುವುದು । ತಕ್ಕುದಾ ವ್ರತ ನಿನಗೆ - ಮಂಕುತಿಮ್ಮ ॥ ೭೩೦ ॥
hakki munna ariyuvude tanna payaNada terana? । ikkuvaru adAru adanu karedu tirupeyanu? ॥ rekke pOdantu aledu, sikkidanu uNNuvudu । takkudA vrata ninage - Mankutimma ॥ 730 ॥
‘ತನ್ನ ರೆಕ್ಕೆಯ ಬಡಿಯುತ್ತಾ ಸಾಗುವ ಹಕ್ಕಿಗೆ ತನ್ನ ಪಯಣ ಹೇಗೆ ಸಾಗುತ್ತದೆ ಎಂದು ಮುಂಚೆಯೇ ಗೊತ್ತಿರುವುದೇ? ಅದಕ್ಕೆ ಯಾರಾದರೂ ‘ಬಾ ಬಾ’ ಎಂದು ಕರೆದು ಊಟವನ್ನು ನೀಡುತ್ತಾರೆಯೇ? ರೆಕ್ಕೆ ಬಡಿದ ಹಾಗೆ ಅದರ ಗತಿ ಸಾಗುವುದು ಮತ್ತು ಎಲ್ಲಿ ಏನು ಸಿಕ್ಕರೆ ಅದನ್ನು ತಿನ್ನುವುದು. ಈ ರೀತಿ ಬದುಕ ಸಾಗಿಸಬೇಕೆಂಬುದೇ ‘ನಿನ್ನ ವ್ರತವಾಗಿರಬೇಕು’ ಎಂದು ಸ್ವಚ್ಚಂದ ಜೀವನದ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
Will the bird know in advance what is going to happen it during the day? Is there anyone who will call it and give scraps. It will go as its wings take it. It will eat whatever it gets. Its lifestyle is very suitable to you also. - Mankutimma
Video Coming Soon
Detailed video explanations by scholars and experts will be available soon.