Mankutimmana Kagga by D.V. Gundappa
ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ । ದುಡಿ ಕೈಯಿನಾದನಿತು; ಪಡು ಬಂದ ಪಾಡು ॥ ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು । ಬಿಡುಗಡೆಗೆ ದಾರಿಯದು - ಮಂಕುತಿಮ್ಮ ॥ ೭೨೯ ॥
eDaru toDaru enalEke? biDisu matige Adanita । duDi kaiyina Adanitu; paDu banda pADu ॥ biDu mikkudanu vidhige; biDadiru upashaantiyanu । biDugaDege dAriyadu - Mankutimma ॥ 729 ॥
‘ ಅಯ್ಯೋ ಬದುಕಿನಲ್ಲಿ ಕಷ್ಟಗಳು ಬಂದಿವೆಯಲ್ಲಾ’ ಎಂದು ನೀ ಏಕೆ ಹೇಳುತ್ತೀಯೆ? ಆ ತೊಡಕುಗಳನ್ನು ನಿನ್ನ ಬುದ್ದಿಗೆ ತೋಚಿದಷ್ಟನ್ನು, ಕೈಲಾದಷ್ಟನ್ನು ನೀನೇ ಬಿಡಿಸಿಕೋ. ನಿನ್ನ ಸಮಸ್ಯೆಗಳನ್ನು, ನಿನ್ನ ಕೈಲಾದಷ್ಟು, ನೀನೇ ತೀರಿಸಿಕೋ. ತೀರಿಸಲಾಗದ್ದನ್ನು ಅನುಭವಿಸು. ಮಿಕ್ಕದ್ದನ್ನು ಆ ವಿಧಿಯಾಟಕ್ಕೆ ಬಿಟ್ಟುಬಿಡು. ಆದರೆ ಪ್ರಯತ್ನಪಡುವಾಗ ಅನುಭವಿಸುವಾಗ ಅಂತರಂಗದ ಶಾಂತಿಯನ್ನು ಕಾಪಾಡಿಕೋ. ಅದೇ ಬಿಡುಗಡೆಗೆ ದಾರಿ ಎಂದು ನಿರ್ಲಿಪ್ತ ಬದುಕಿನ ಪ್ರ್ರಯತ್ನ ಹೇಗಿರಬೇಕೆಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ
Why keep worrying about obstacles in life? Solve as many as possible for your mind. You put in the hard work. Then live through the consequences. Leave the rest to Providence. Never let of of the inner tranquility. This is the path to salvation - to be free from the cycle of misery. - Mankutimma
Video Coming Soon
Detailed video explanations by scholars and experts will be available soon.