Mankutimmana Kagga by D.V. Gundappa
ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ । ಆಯಸಂಬಡಿಸದವೊಲಂತರಾತ್ಮನನು ॥ ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ । ಆಯುವನು ಸಾಗಿಸೆಲೊ - ಮಂಕುತಿಮ್ಮ ॥ ೭೩೬ ॥
kAyakava charisutta, mAnasava saytiDuta । aayasam baDisadavol antaraatmananu ॥ mAyeyoDane aaDutta, bommananu bhajisutta । aayuvanu sAgiselo - Mankutimma ॥ 736 ॥
ಕರ್ತವ್ಯವನ್ನು ಮಾಡುತ್ತಾ ನಮ್ಮದೇ ಮನಸ್ಸನ್ನು ಸಂತೈಸುತ್ತಾ ಆತ್ಮವನ್ನು ಆಯಾಸಗೊಳಿಸದಂತೆ, ಜಗತ್ತಿನ ಮಾಯೆಯೊಡನೆ ಆಟವಾಡುತ್ತಾ, ಪರಮಾತ್ಮನನ್ನು ಭಜಿಸುತ್ತಾ ನಿನ್ನ ಬದುಕನ್ನು ಸಾಗಿಸು ಎಂದು ನಾವು ಜಗತ್ತಿನಲ್ಲಿ ಹೇಗಿರಬೇಕು ಎನ್ನುವುದನ್ನು ಬಹಳ ಸೂಕ್ತವಾಗಿ ಆದೇಶ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
Do your duty. Console your mind. Don't let your inner conscience get anxious. Play (revel) with the grand illusion of this world. Always keep God in mind. You must get through your life like this. - Mankutimma
Video Coming Soon
Detailed video explanations by scholars and experts will be available soon.