Mankutimmana Kagga by D.V. Gundappa
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ । ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ॥ ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ । ಒಂಟಿಸಿಕೊ ಜೀವನವ - ಮಂಕುತಿಮ್ಮ ॥ ೭೩ ॥
nanTu tanTegaLa ganTI brahmabhanDAra । anTillavenage idaroLu ennadu iradenduM ॥ onTi nInu oLajagake bhanTa horajagakAgi । onTisiko jIvanava - Mankutimma ॥ 73 ॥
ಈ ಜಗತ್ತಿನಲ್ಲಿ ಆ ಪರಮಾತ್ಮನ ಸೃಷ್ಟಿಯಲ್ಲಿ , ನಂಟುಗಳು ಮತ್ತು ಅಂಟುಗಳು ಮತ್ತು ಗಂಟುಗಳು ಬಹಳಷ್ಟಿವೆ. “ಇದೆಕ್ಕೆಲ್ಲ ನನಗೆ ಸಂಬಂಧವಿಲ್ಲ” ಎಂದು ಹೇಳಬೇಡ ಎಂದೆಂದೂ. ಅಂತರ್ಯದಲ್ಲಿ ನೀನು ಒಬ್ಬಂಟಿಯಾಗಿರು, ಆದರೆ ಹೊರ ಜಗತ್ತಿಗೆ ನಿನ್ನ ನಂಟು ಒಬ್ಬ ಆಳಿನಂತೆ ಇದ್ದು ಈ ಜೀವನಕ್ಕೆ ನೀ ಅಂಟಿಸಿಕೊ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
This whole universe is a big knot of interdependence, attachments and worries. There is no way one can deny having any attachment. Nor can one say that they have no part in it. One may be a loner and independent in his inner world (of mind). But to the outer world, he still has to participate a player (friend, father, spouse, child...). It is best to lead the life accepting this fact. - Mankutimma
Video Coming Soon
Detailed video explanations by scholars and experts will be available soon.