Mankutimmana Kagga by D.V. Gundappa
ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು । ಹೊಮ್ಮುವೆನು ಕೋಟಿರೂಪದಲಿ ನಾನೆಂದು ॥ ಬೊಮ್ಮನೆಳಸಿದನಂತೆ. ಆ ಯೆಳಸಿಕೆಯೆ ಮಾಯೆ । ನಮ್ಮಿರವು ಮಾಯೆಯಲಿ - ಮಂಕುತಿಮ್ಮ ॥ ೭೪ ॥
summane obbanTiyentihudu? bEsaravahudu । hommuvenu kOTirUpadali nAnendu ॥ bommanu eLesidanante. A yeLasikeye mAye । namma iruvu mAyeyali - Mankutimma ॥ 74 ॥
ಆ ಪರಮಾತ್ಮನಿಗೆ ಒಬ್ಬನೇ ಇರುವುದು ಹೇಗೆ ಎಂದು ಅನಿಸಿ ಬೇಸರಬಂದು, ನಾನು ಕೋಟಿ ಕೋಟಿ ರೂಪದಲಿ ಹೊರ ಹೊಮ್ಮುವೆನು ಎಂದುಕೊಂಡು ಆ ಮಾಯಾ ರೂಪದ ಜಗತ್ತನ್ನು ಸೃಷ್ಟಿಮಾಡಿದನಂತೆ. ಆ ಮಾಯೆಯೇ ಈ ಜಗತ್ತು. ನಾವಿರುವುದು ಈ ಮಾಯೆಯೊಳಗೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. ಹಾಗಾಗಿ ಪರಬ್ರಹ್ಮ ಹಾಲು. ಉಕ್ಕಿ ಹರಿಯುವ ನೊರೆಯೇ ಸೃಷ್ಟಿ.
The creator is said to have gotten bored of being alone. He thought, let me materialise in crores of forms. This thought itself is Maya (the illusion). Our existence is inside that illusion. - Mankutimma
Video Coming Soon
Detailed video explanations by scholars and experts will be available soon.