Mankutimmana Kagga by D.V. Gundappa
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು । ಅವನಾ ಬಂಧುತೆಯ ಜಡೆಯ ಬಿಡಿಸುವನು? ॥ ಜೀವ ಜೀವಕೆ ನಂಟು ಜಡ ಚೇತನಕೆ ನಂಟು । ಆವುದದಕಂಟಿರದು? - ಮಂಕುತಿಮ್ಮ ॥ ೭೨ ॥
ee vishvadali nODalu ellaru ellara nanTu । avanA bandhuteya jaDe bidisuvanu? ॥ jIva jIvake nanTu jaDa chEtanake nanTu । Avudadake anTiradu? - Mankutimma ॥ 72 ॥
ಈ ಜಗತ್ತಿನ ಎಲ್ಲವೂ ಒಂದು ರೀತಿಯ ಪರಸ್ಪರ ಕೊಂಡಿಹಾಕಿಕೊಂಡು ಅಂಟಿಕೊಂಡಿವೆ. ಜಡೆಯ ತರಹ ಹೆಣೆದು ಕೊಂಡಿರುವ ಈ ಅಂಟಿನ ನಂಟನ್ನು ಮತ್ತು ಗಂಟನ್ನು ಯಾರು ಬಿಡಿಸುವವರು. ಜೀವ ಜೀವಕೆ ನಂಟು ಚೇತನ ಮತ್ತು ಜಡಕ್ಕೆ ನಂಟು, ಯಾವುದದಕಂಟಿರದು, ಅಂದರೆ ಯಾವುದಕ್ಕೆ ಅಂಟಿರದು ಹೇಳಿ ನೋಡುವಾ ಎಂಬಂತೆ ಜಗತ್ತಿನ ಬಾಂಧವ್ಯಗಳನ್ನು ಈ ಕಗ್ಗದಲ್ಲೂ, ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.
O! Mankutumma, in this world every one is connected to every one else in some way or other. Will God tell us how to unwind this tangle of interconnectedness? Truly, everything is connected - connections from living things to other living things (via a food chain or symbiosis) is understandable. But even a man's mind can create attachment to even non-living things like material possessions. Tell me which object in this world is completely detached from the rest of the creation? - Mankutimma
Video Coming Soon
Detailed video explanations by scholars and experts will be available soon.