Mankutimmana Kagga by D.V. Gundappa
ತರಣಿ ಕಿರಣದ ನಂಟು ಗಗನ ಸಲಿಲದ ನಂಟು । ಧರಣಿ ಚಲನೆಯ ನಂಟು ಮರುತನೊಳ್ನಂಟು ॥ ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ । ಕಿರಿದು ಪಿರಿದೊಂದಂಟು - ಮಂಕುತಿಮ್ಮ ॥ ೭೧ ॥
taraNi kiraNada nanTu gagana salilada nanTu । dharaNi chalaneya nanTu marutanoL nanTu ॥ paripariya nanTugaLina ondu ganTu ee vishva । kiridu pridondu anTu - Mankutimma ॥ 71 ॥
ಸೂರ್ಯನ ಮತ್ತು ಕಿರಣದ ಸಂಬಂಧ, ಆಕಾಶದ ಮತ್ತು ಮಳೆ ನೀರಿನಸಂಬಂಧ, ಭೂಮಿಯ ಸುತ್ತುವಿಕೆಯ ಸಂಬಂಧ, ಮತ್ತು ಅದಕ್ಕನುಗುಣವಾಗಿ ಬೀಸುವ ಗಾಳಿಯ ಸಂಬಂಧ,ಹೀಗೆ ಒಂದಕ್ಕೊಂದು ನಂಟು ಹಾಕಿಕೊಂಡು ಹಲವಾರು ಬಗೆಯ ಸಂಬಂಧಗಳ ಒಂದು ಗಂಟೆ ಈ ಜಗತ್ತು ಇದರಲ್ಲಿ ಕೆಲವು ಸಣ್ಣ ಸಣ್ಣ ನಂಟುಗಳು ಮತ್ತೆ ಕೆಲವು ದೊಡ್ಡದಾದ ಗಂಟುಗಳು ಎಂದು ಈ ಜಗತ್ತಿನ ಎಲ್ಲವಸ್ತುಗಳ ಪರಸ್ಪರ ಸಂಬಂಧಗಳನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
This whole world is made of complex knot of connections - some small and some big. The sun is related to his rays, the sky has attachment to the water below, earth is connected to its movement, together they are connected to the flow of air. - Mankutimma
Video Coming Soon
Detailed video explanations by scholars and experts will be available soon.