Mankutimmana Kagga by D.V. Gundappa
ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ । ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ॥ ಬಾವಿಗೂಟೆಯನಿತ್ತು ನರರೊಡಲ ಸೇರುವುದು । ದೈವ ರಸತಂತ್ರವಿದು - ಮಂಕುತಿಮ್ಮ ॥ ೭೦ ॥
bhUmi viShayadali pudida rasa vAsanegaLella । AviyAgi eLdu mugilAgi maLegeradu ॥ bAvige UTeyanu ittu narara oDala sEruvudu । daiva rasatantravidu - Mankutimma ॥ 70 ॥
ಈ ಭೂಮಿಗೆ ಸಂಬಂಧಿಸಿದ ಮತ್ತು ಈ ಭೂಮಿಯಲ್ಲಿ ಅಡಗಿದ ರಸಗಳು ಸೂರ್ಯನ ಶಾಖದಿಂದ, ಆವಿಯಾಗಿ, ಅದು ಮೋಡವಾಗಿ ಮತ್ತೆ ಮಳೆಯಾಗಿ ಧರೆಗಿಳಿದು ಆ ಮಳೆಯನೀ ಭೂಮಿಯಲ್ಲಿ ಇಂಗಿ ಭಾವಿಗಳಿಗೆ ಒರತೆಯಾಗಿ ಆ ನೀರನ್ನು ಕುಡಿದ ನರರ ದೇಹವನ್ನು ಸೇರುವುವು. . ಇದೆ ದೈವ ನಿರ್ಮಿಸಿದ ರಸತಂತ್ರ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
Juice and fragrance that is hidden in the earth gets pulled up as water-vapour. It then becomes clouds, then rains, then goes into the earth and fills the well in the form of springs. Then man drinks that water and it becomes a part of him. God has this strange policy for water - so elaborate, yet so accurate. - Mankutimma
Video Coming Soon
Detailed video explanations by scholars and experts will be available soon.