Mankutimmana Kagga by D.V. Gundappa
ಹೆಸರನರಿಯದ ಸಸಿಯೊಳಿರವೆ ರಸಗಂಧಗಳು? । ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ॥ ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು । ಉಸಿರುತಿಹೆವದ ನಾವು - ಮಂಕುತಿಮ್ಮ ॥ ೬೯ ॥
hesaranu ariyada sasiyoLirave rasagandhagaLu? । bisilu adanu pakvagoLisute biDisadihude? ॥ pasarisade gALiyu adanoydu disedisegaLoLu । usirutihevu ada nAvu - Mankutimma ॥ 69 ॥
ನಮಗೆ ಹೆಸರೇ ಗೊತ್ತಿಲ್ಲದ ಸಸಿಯಲ್ಲಿ ಮಕರಂದ ಮತ್ತು ಸುಗಂಧಗಳಿರುವುದಿಲ್ಲವೇ? ಆ ಸೂರ್ಯನ ಬೆಳಕಿನಿಂದ ಅವು ಬೆಳೆಯುವುದಿಲ್ಲವೇ? ಆ ಗಿಡಗಳಲ್ಲಿರುವ ಸುಗಂಧವನ್ನು ಗಾಳಿಯು ದಿಕ್ಕು ದಿಕ್ಕುಗಳಿಗೆ ಪಸರಿಸದೆ? ಅಂತಹ ಗಾಳಿಯನ್ನು ನಾವು ಉಸಿರಾಡುತ್ತಿಲ್ಲವೇ? ಎಂದು ಒಂದು ಗಹನವಾದ ವಿಚಾರವನ್ನು ಈ ಕಗ್ಗದ ಮೂಲಕ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
Doesn't a unnamed plant have juice and scent glands? Doesn't sunlight help in ripening it and make it bloom? Doesn't wind carry the scent in all directions? We are breathing the same scent. [Translator's note: Just because man has no name for it, it is no less important part of the creation. All other actors in this nature do not differentiate among other creatures - especially not based on their percieved utility.] - Mankutimma
Video Coming Soon
Detailed video explanations by scholars and experts will be available soon.