Mankutimmana Kagga by D.V. Gundappa
ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ । ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ॥ ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು । ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ॥ ೭೨೩ ॥
svasthateya kadalisada jagada aastheyondu guNa । aastheyanu kundisada tATasthyavondu ॥ naShTa lAbhangaLa laghuhAsya nayavondu । svastige aavashyakavo - Mankutimma ॥ 723 ॥
ನಮ್ಮ ಕ್ಷೇಮವನ್ನು ಕದಡದ ಬದುಕಿನಾಸೆಯ ಗುಣ, ಆಸೆ ಅಥವಾ ನಿರಾಸೆ ಎರಡೂ ಅತಿಯಾಗದೆ ಸಮತೋಲನವನ್ನು ಕಾಪಾಡಿಕೊಳ್ಳುವ ಗುಣ, ನೋವು ನಲಿವುಗಳನ್ನು ಒಂದು ನವಿರಾದ ಹಾಸ್ಯ ತೋರುತ್ತಾ ಸಾಕ್ಷಿಯಂತೆ ಕಂಡು ನಸುನಕ್ಕುಬಿಡುವ ಗುಣಗಳು, ನಮ್ಮ ಕ್ಷೇಮಕ್ಕೆ ಅವಶ್ಯಕವೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
One must love the entire world. But not too much that can spoil your own balance. There must be detachment from everything. But the passion in one's work must not come down. Both profit and loss have to taken with light humor. All these are required for total well being of yourself. - Mankutimma
Video Coming Soon
Detailed video explanations by scholars and experts will be available soon.