Back to List

Kagga 724 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ । ಹಿತವಿರಲಿ ವಚನದಲಿ, ಋತವ ಬಿಡದಿರಲಿ ॥ ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ । ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ॥ ೭೨೪ ॥

smitavirali vadanadali, kivige kELisadirali । hitavirali vachanadali, Rutava biDadirali ॥ mitavirali manasina udvEgadali, bhOgadali । ati bEDavo elliyum - Mankutimma ॥ 724 ॥

Meaning in Kannada

‘ನಿನ್ನ ಮೊಗದಲ್ಲಿ ನಗೆಯಿರಲಿ. ಆದರದು ಅನ್ಯರಿಗೆ ಕೇಳಿಸದಿರಲಿ. ನಿನ್ನ ಮಾತಿನಲ್ಲಿ ಹಿತವಿರಲಿ ಆದರೆ ಅದು ಸತ್ಯವಾಗಿರಲಿ. ಸುಖದುಃಖಗಳ ಅನುಭವದಲ್ಲಿ ಒಂದು ಮಿತಿಯಿರಲಿ, ಯಾವುದರಲ್ಲಿಯೂ ಅತಿಯಾಗದಿರಲಿ,’ ಎಂದು ನಮ್ಮ ಬದುಕಿನಲ್ಲಿ ನಾವು ನಮ್ಮ ಅ ಹಿತಕ್ಕಾಗಿಯೇ ಪಾಲಿಸಬೇಕಾದ ಕೆಲ ಮೂಲಭೂತ ವಿಚಾರಗಳನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

Let there be a smile on your face always. But let it not turn into a laughter that hurts others (let it not fall on other's ears). Always speak pleasantly. But do not leave the path of truth. There must be moderation in anxiety and indulgence. Let there not be over indulgence in anything. - Mankutimma

Themes

WisdomDetachmentSociety

Video Section

Video Coming Soon

Detailed video explanations by scholars and experts will be available soon.