Mankutimmana Kagga by D.V. Gundappa
ಚೆಲುವುನಗುವುಗಳ ಕಂಡವನ ಕಣ್ಣರಳುವುದು । ಅಳುವುನೋವುಗಳ ಕಂಡೊದ್ದೆಯಾಗುವುದು ॥ ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು । ಶಿಲೆಯಲ್ಲ ಯೋಗಿಯೆದೆ - ಮಂಕುತಿಮ್ಮ ॥ ೭೨೨ ॥
cheluvu naguvugaLa kanDu avana kaNNaraLuvudu । aLalu nOvugaLa kanDu oddeyAguvudu ॥ iLeya danige avanedeya oLa oppu marudaniyahudu । shileyalla yOgi ede - Mankutimma ॥ 722 ॥
ಸೊಗಸು, ನಗುಗಳ ಕಂಡು ಯೋಗಿಯ ಕಣ್ಣು ಸಂತಸದಿಂದ ಅರಳುವುದು, ಅನ್ಯರ ನೋವು ಮತ್ತು ತತ್ಕಾರಣ ಆಗುವ ದುಃಖವನ್ನು ಕಂಡು ಅವನ ಹೃದಯ ಕಣ್ಣೀರ ಹಾಕುವುದು,ಜಗತ್ತಿನ ದನಿಗೆ ಮಾರ್ದನಿಕೊಡುವ ಹೃದಯ ಯೋಗಿಗೆ ಇದೆ.ಅವನೇನು ಹೃದಯವಿಲ್ಲದ ಶಿಲೆಯಂತಹ ಮನುಷ್ಯನಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Many people think ascetics who have the universal realization are devoid of feelings and are stone cold. Their eyes (pupils) light up when they see beauty and happiness. They shed tears when they see crying and pain. His heart's inner voice will respond to all the world sounds appropriately. His heart is not a stone. - Mankutimma
Video Coming Soon
Detailed video explanations by scholars and experts will be available soon.