Mankutimmana Kagga by D.V. Gundappa
ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ । ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? ॥ ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ । ನಿಳೆಗೆ ಹರಡುವುದೇಕೊ? - ಮಂಕುತಿಮ್ಮ ॥ ೭೧೯ ॥
tale pAgina oLa koLaka, pancheniriya oLa haraka । tiLisuveya rajakagallade lOgaringe? ॥ aLalu duguDagaLa ninnoLage baytiDade nInu । iLege haraDuvudEko? - Mankutimma ॥ 719 ॥
"ನೋಡು ತಲೆಗೆ ಸುತ್ತುವ ರುಮಾಲಿನಲ್ಲಿ ಇಲ್ಲಿ ಕೊಳೆಯಾಗಿದೆ" ಯೆಂದೋ, ಅಥವಾ ಉಡುವ ಪಂಚೆಯ ನೆರಿಗೆಯಲ್ಲಿ ಹರಿದಿದೆ ‘ಜೋಪಾನವೆಂದೋ’, ಅದನ್ನು ಒಗೆಯುವ ಅಗಸನಿಗೆ ಮಾತ್ರ ನೀನು ಹೇಳುತ್ತೀಯೆ!! ಲೋಕದ ಜನಕ್ಕೆಲ್ಲ ಅಲ್ಲವಲ್ಲ. ಅದೇ ರೀತಿ ಬದುಕಿನ ನಿನ್ನ ಜಂಜಾಟ, ದುಗುಡ, ದುಮ್ಮಾನಗಳನ್ನು ಜಗತ್ತಿಗೆಲ್ಲ ಏಕೆ ಸಾರುತ್ತೀಯೇ? ಎಂದು ಕೇಳುತ್ತಾ ನಮಗೆ ಸಂದ ಕಷ್ಟಗಳನ್ನು ನಾವೇ ಗುಟ್ಟಾಗಿ ಹೇಗೆ ಅನುಭವಿಸಬೇಕು ಎಂದು ಸಾರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
You will not show the dirt on inner side of the hat or the tear in the inner folds of the dhoti to the world. You will only share it with your laundry man. Then why do you want to share your grief and anxiety with the whole world? - Mankutimma
Video Coming Soon
Detailed video explanations by scholars and experts will be available soon.