Mankutimmana Kagga by D.V. Gundappa
ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು । ರಸವು ನವನವತೆಯಿಂದನುದಿನವು ಹೊಮ್ಮಿ ॥ ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ । ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ ॥ ೭೨೦ ॥
hosatanave bALu; haLasikeyella sAvu biDu । rasavu navanavateyinda anudinavu hommi ॥ hasanondu nuDiyalli naDeyalli nOTadali । pasarutire bAL cheluvu - Mankutimma ॥ 720 ॥
ಹೊಸತನವೇ ಬಾಳು, ಗತಿಸಿಹೋದುದ್ದೆಲ್ಲ ಸತ್ತುಹೋಗಿದೆ, ಅದನ್ನು ಬಿಟ್ಟುಬಿಡು. ಮೃದುವಾದ ಮಾತು, ನಮ್ಮ ಸುತ್ತಲಿನವರಿಗೆ ಹಿತವಾಗುವಂತೆ ನಮ್ಮ ನಡೆ ಮತ್ತು ಭಾವಗಳನ್ನು ಪ್ರತಿನಿತ್ಯವೂ ಹೊಸತಾಗಿ ಸೂಸುತ್ತಾ ಅಂತಹ ಸಂತಸದ ಮಾತು ಮತ್ತು ಭಾವಗಳನ್ನು ಹೊರಹೊಮ್ಮಿಸುತ್ತಿದರೆ ಬದುಕು ಸುಂದರವಾಗಿರುತ್ತದೆ ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ .
Freshness is life. Stale is death. Get rid of it. Life springs out of that freshness every day. We must spread goodness in the form of words, acts and perspective. Life is beautiful then. - Mankutimma
Video Coming Soon
Detailed video explanations by scholars and experts will be available soon.