Mankutimmana Kagga by D.V. Gundappa
ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? । ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ॥ ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು । ಬೆನ್ನಿನಲಿ ಹೊತ್ತು ನಡೆ - ಮಂಕುತಿಮ್ಮ ॥ ೭೧೮ ॥
tanna shilubheya tAne hottanala guru yEsu? । ninna karmada horeya biDade nIne horu ॥ khinnanAgade tuTiya bigidu shavabhAravanu । benninali hottu naDe - Mankutimma ॥ 718 ॥
‘ಯೇಸು’ ತನ್ನನ್ನು ಏರಿಸಿದ ಶಿಲುಬೆಯನ್ನು ತಾನೇ ಹೊತ್ತು ನಡೆದಂತೆ ನಿನ್ನ ಕರ್ಮದ ಭಾರವನ್ನು ನೀನೇ ಬಿಡದೆ ಹೊರಬೇಕು. ಬೇಸರಮಾಡಿಕೊಳ್ಳದೆ ನಿರಾಶೆ ಪಡದೆ ಆ ಭಾರವನ್ನು ಹೊತ್ತು ನಡೆಯಬೇಕು ಎಂದು ಕರ್ಮಾನುಭವದ ಮತ್ತು ಅವರವರ ಕರ್ಮವನ್ನು ಅವರವರೇ ಸವೆಸಬೇಕಾದ ಪರಿಯನ್ನು ತಿಳಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
Did Guru Yesu (Jesus) not carry his own crucifix to his death? One must carry his the burden of his actions himself. He must do so with his lips closed (not cribbing). There is no escaping from carrying the burden of death (accounts that have not squared off). - Mankutimma
Video Coming Soon
Detailed video explanations by scholars and experts will be available soon.