Mankutimmana Kagga by D.V. Gundappa
ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ । ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ॥ ನಿನ್ನೊಡಲೆ ಚಿತೆ, ಜಗದ ತಂಟೆಗಳೆ ಸವುದೆಯುರಿ । ಮಣ್ಣೆ ತರ್ಪಣ ನಿನಗೆ - ಮಂಕುತಿಮ್ಮ ॥ ೭೧೭ ॥
ninna heNavanu nIne hottu sAgisabEko । aNNa baa tamma baa endu aLuvudEkO? ॥ ninnoDale chite, jagada tanTegaLe savude uri । maNNe tarpaNa ninage - Mankutimma ॥ 717 ॥
ನಿನ್ನ ಬದುಕಿನ ಬವಣೆಗಳನ್ನು ನೀನೇ ಅನುಭವಿಸಬೇಕು. ಅದನ್ನನುಭವಿಸಲು ಬೇರೆಯಾರನ್ನಾದರೂ ‘ ಅಣ್ಣಾ ಬಾ ಅಥವಾ ತಮ್ಮಾ ಬಾ’ ಎಂದು ಕರೆಯುವ ಹಾಗಿಲ್ಲ ನಿನ್ನ ಅಂತರಂಗವೇ ಚಿತೆ ಮತ್ತು ಆ ಚಿತೆಯುರಿಯಲು ಉರುವಲೇ ಬದುಕಿನ ತಾಪತ್ರಯಗಳು. ಕಡೆಗೆ ನಿನಗೆ ಮಣ್ಣೇ ತರ್ಪಣ ಎಂದು ಬದುಕಿನಲ್ಲಿ ಪ್ರತಿಯೊಬ್ಬರ ಒಂಟಿತನದ, ಏಕಾಕಿತನದ ಅನಿವಾರ್ಯತೆಯನ್ನು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
You must carry your own dead body (burden of life). You should not call for help from your brothers and friends. You must live life such that there is no weight left when you die. Your body is the pyre. The troubles that the world gives you is the firewood. The dirt that the world sets on you while working is the cleansing water. You must die (perform all duties you are supposed to) before your body dies. - Mankutimma
Video Coming Soon
Detailed video explanations by scholars and experts will be available soon.