Mankutimmana Kagga by D.V. Gundappa
ಮೃತನ ಸಂಸಾರಕಥೆ ಶವವಾಹಕರಿಗೇಕೆ? । ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ ॥ ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು । ಧೃತಿಯ ತಳೆ ನೀನಂತು - ಮಂಕುತಿಮ್ಮ ॥ ೭೧೬ ॥
mRutana samsAra kathe shava vAhakarigEke?। satiyu gOLiDali, sAliganu bobbiDali ॥ jitamanadi chitigaTTi konDoyyutiharu avaru । dhRutiya taLe nInu antu - Mankutimma ॥ 716 ॥
ಹೆಣಹೊರುವವರಿಗೆ ಸತ್ತವರ ಮನೆಯವರ ಗೋಳಿನ ಬಗ್ಗೆ ಗಮನವೇಕೆ. ಸತ್ತವನ ಹೆಂಡತಿ(ಗಂಡ) ಅಳುತ್ತಿದ್ದರೂ, ಅವನಿ(ಳಿ)ಗೆ ಸಾಲವನ್ನು ಕೊಟ್ಟವರು ಬೊಬ್ಬೆಹಾಕುತ್ತಿದ್ದರೂ ಅವಾವುದೂ ‘ನಮಗೆ ಕೇಳಲೇ ಇಲ್ಲ’ ಎನ್ನುವಂತೆ ಜಿತ ಮನಸ್ಕರಾಗಿ ಹೆಣವನ್ನು ಚಿತೆಗೇರಿಸುವ ಸಲುವಾಗಿ ತೆಗೆದು ಹೋದಂತೆ, ನೀನೂ ಸಹ ಬದುಕಿನಲ್ಲಿ ಆಗುಹೋಗುಗಳಿಗೆ ತಲೆಕೆಡಿಸಿಕೊಳ್ಳದೆ ನಿರ್ಮಮತೆಯಿಂದ ಬದುಕು ಎಂದು ಬದುಕಿನಲ್ಲಿ ನಾವು ಖಡ್ಡಾಯವಾಗಿ ಅಳವಡಿಸಿಕೊಳ್ಳಲೇ ಬೇಕಾದ ವಿಚಾರವನ್ನು ಅರುಹಿದ್ದಾರೆ.
Do the carriers of a man's cadaver worry about the stories of his life. They do not care if the wife is crying or the banker who lent him money is creating a ruckus. They seem to have controlled their mind and focused on getting the body away in the coffin. One must try to be detached like them. - Mankutimma
Video Coming Soon
Detailed video explanations by scholars and experts will be available soon.