Back to List

Kagga 715 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕ್ಷಮೆ ದೋಷಿಗಳಲಿ, ಕೆಚ್ಚೆದೆ ವಿಧಿಯ ಬಿರುಬಿನಲಿ । ಸಮತೆ ನಿರ್ಮತ್ಸರತೆ ಸೋಲ್ಗೆಲುವುಗಳಲಿ ॥ ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು । ಭ್ರಮೆಯೊ ಮಿಕ್ಕೆಲ್ಲ ತಪ - ಮಂಕುತಿಮ್ಮ ॥ ೭೧೫ ॥

kShame dOShigaLali, kecchede vidhiya birubinali । samate nirmatsarate sOl geluvugaLali ॥ shamava nIm gaLisalu ee nAlku tapagaLe sAku । bhrameyo mikkella tapa - Mankutimma ॥ 715 ॥

Meaning in Kannada

ದೋಷವಿರುವರಲ್ಲಿ ಕ್ಷಮೆಯನ್ನು ತೋರುವುದು, ವಿಧಿಯ ಹೊಡೆತಗಳು ಅಧಿಕವಾದಾಗ ಧೈರ್ಯವನ್ನು ಬಿಡದೆ ಇರುವುದು, ಸೋಲು ಗೆಲುವುಗಳಲ್ಲಿ ಸಮಾನ ಮನಸ್ಕರಾಗಿರುವುದು, ಅನ್ಯರಲ್ಲಿ ಮತ್ಸರವ ತೋರದಿರುವುದು ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಮಾಡಬೇಕಾದ ನಾಲ್ಕು ಶ್ರೇಷ್ಠತಮ ತಪಸ್ಸುಗಳು ಮತ್ತು ಮಿಕ್ಕೆಲ್ಲ ಪ್ರಯತ್ನಗಳೂ ಕೇವಲ ನಮ್ಮ ಭ್ರಮೆಯಷ್ಟೇ ಎಂದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

You must show forgiveness to those who have erred. One must be courageous when providence conspires against you. You must show equality in defeat or victory. One must never be jealous of other's success. These are the only four penances required to get your mind under control. All other penances are just illusions - Mankutimma

Themes

Video Section

Video Coming Soon

Detailed video explanations by scholars and experts will be available soon.