Back to List

Kagga 714 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪರಿಮಿತಿಯನರಿತಾಶೆ, ಪರವಶತೆಯಳಿದ ಸುಖ । ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ॥ ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ । ವರಗಳೀ ನಾಲ್ಕೆ ವರ - ಮಂಕುತಿಮ್ಮ ॥ ೭೧೪ ॥

parimitiyan arita aashe, paravashateyu aLida sukha । viratiyoDavereda lOkOdyOga yukti ॥ parikisuta jIvitava satyavane piDiva mati । varagaLI nAlke vara - Mankutimma ॥ 714 ॥

Meaning in Kannada

ನಮ್ಮ ಆಸೆಗಳ ಮಿತಿಯನ್ನು ಅರಿಯುವುದು, ಅತೀ ಉತ್ಸಾಹದ ಸುಖಾನುಭವವಿಲ್ಲದಿರುವುದು, ಲೋಕದಲ್ಲಿ ನಾವು ಮಾಡುವ ಕೆಲಸಕ್ಕೆ ಅತಿಯಾಗಿ ಅಂಟಿಕೊಳ್ಳದೆ ಒಂದು ವಿರಕ್ತ ಭಾವದಿಂದಿರುವುದು, ಮತ್ತು ಜೀವನದ ಪ್ರತೀ ಅನುಭವವನ್ನೂ ಪರೀಕ್ಷಿಸುತ ಅದರಲ್ಲಿನ ಸತ್ಯವನ್ನು ಕಂಡುಕೊಂಡು, ಅದರ ಸತ್ವವನ್ನು ಹಿಡಿದುಕೊಳ್ಳುವುದೇ ಆ ಪರಮಾತ್ಮ ನರನಿಗೆ ಕರುಣಿಸಿದ ಶ್ರೇಷ್ಠ ವರಗಳು ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Having desires that know their limits. Happiness that is got when one is freed from bondage. Being able to perform duties of the world with detachment. Having an intellect that can dig the facts of life to search and hold on to the truth. These are four boons and the only boons that one must wish for. - Mankutimma

Themes

WisdomLifeDetachment

Video Section

Video Coming Soon

Detailed video explanations by scholars and experts will be available soon.