Back to List

Kagga 713 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕಾಯಕವ ಚರಿಪುದಾತ್ಮ ಜುಗುಪ್ಸೆಗೆಡೆಗುಡದೆ । ಆಯತದ ಲೋಕಧರ್ಮಗಳ ಪಾಲಿಪುದು ॥ ಆಯತಿಗೆ ಬಾಯ್ಬಿಡದೆ ಗತವ ಚಿಂತಿಸದಿಹುದು । ಧ್ಯೇಯವೀ ಸೂತ್ರಗಳು - ಮಂಕುತಿಮ್ಮ ॥ ೭೧೩ ॥

kAyakava charipudu Atma jugupsege eDeguDade । Ayatada lOkadharmagaLa pAlipudu ॥ Ayatige bAybiDade gatava chintisade ihudu । dhyEyavI sUtragaLu - Mankutimma ॥ 713 ॥

Meaning in Kannada

‘ಆತ್ಮ’ ನೊಂದುಕೊಳ್ಳದ ರೀತಿಯಲ್ಲಿ ಕಾಯಕವನ್ನು ಮಾಡುವುದು,ನಮ್ಮ ಪೂರ್ವಜರಿಂದ ವಿಸ್ತಾರವಾಗಿ ನಿರ್ಧರಿಸಲ್ಪಟ್ಟ , ಲೋಕಧರ್ಮವನ್ನು ಪಾಲಿಸುವುದು, ನಮ್ಮ ಕಾಯಕದಿಂದ ಮುಂದೆ ಬರುವ ಫಲಕ್ಕೆ ಬಾಯಿಬಿಟ್ಟು ಕಾಯದೆ, ಹಿಂದೆ ನಡೆದ ಘಟನೆಗಳಿಗಾಗಿ ಚಿಂತೆ ಮಾಡದೆ ಇರುವುದೇ ಬದುಕಿನಲ್ಲಿ ನಾವು ಒಂದು ಧ್ಯೇಯದಂತೆ ಪಾಲಿಸಬೇಕಾದ ಸೂತ್ರಗಳು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

To do work in this world in such a way that the soul is not sad (compromised). To follow all the rules of life in this world. Not to look forward for future gains. Not to think about the past. These are great morals that one must meditate on. - Mankutimma

Themes

LifeWarDuty

Video Section

Video Coming Soon

Detailed video explanations by scholars and experts will be available soon.