Mankutimmana Kagga by D.V. Gundappa
ನಾಸಿಕದೊಳುಚ್ಛ್ವಾಸ ನಿಶ್ವಾಸ ನಡೆವಂತೆ । ಸೂಸುತ್ತಲಿರಲಿ ನಿನ್ನಿರವು ಮಂಗಳವ ॥ ಆಶಿಸದೆ ಸಂಕಲ್ಪಯತ್ನಗಳನಿನಿತುಮಂ । ಸಾಜವಾಗಲಿ ಸಯ್ಪು - ಮಂಕುತಿಮ್ಮ ॥ ೭೧೨ ॥
nAsikadoL ucChvAsa nishvAsa naDevante । sUsuttalirali ninna iravu mangaLava ॥ aashissade sankalpa yatnagalanu initum। sAjavAgali saypu - Mankutimma ॥ 712 ॥
ಉಸಿರಾಡುವುದನ್ನು ನೀನು ಎಷ್ಟು ಸಹಜವಾಗಿ ಮಾಡುತ್ತೀಯೋ ಅಷ್ಟೇ ಸಹಜತೆಯಿಂದ ನಿನ್ನಿಂದ ಮಂಗಳಕರವಾದ ಕೆಲಸಗಳು ನಡೆಯಲಿ ಮತ್ತುಅಂತಹ ಕೆಲಸಗಳನ್ನು ಮಾಡಲು ವಿಶೇಷವಾದ ಸಂಕಲ್ಪದ ಅಥವಾ ಪ್ರಯತ್ನದ ಅವಶ್ಯಕತೆಯಿಲ್ಲದೆ, ಸಹಜವಾಗಿ ಸೂಕ್ತ ಕೆಲಸ ಆಗಲಿ ಎಂದು ಸಹಜ ಬದುಕಿನ ಸೂತ್ರವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The nose inhales and exhales for as long as you are alive. There is no effort there. Let your existence be like that. You bring good things to those around without trying too hard or working towards it exclusively. Let doing good come naturally to you. - Mankutimma
Video Coming Soon
Detailed video explanations by scholars and experts will be available soon.