Mankutimmana Kagga by D.V. Gundappa
ಧರೆಯೆ ಕೋಸಲ, ಪರಬ್ರಹ್ಮನೇ ರಘುವರನು । ಭರತವೊಲನುಪಾಲನಕ್ರಿಯರು ನಾವು ॥ ಅರಸನೂಳಿಗ ನಮ್ಮ ಸಂಸಾರದಾಡಳಿತ । ಹರುಷದಿಂ ಸೇವಿಸೆಲೊ - ಮಂಕುತಿಮ್ಮ ॥ ೭೧೧ ॥
dhareye kOsala, parabrahmanE raghuvaranu । bharatanavol anupAlana kriyaru nAvu ॥ arasana ULiga namma samsArada ADaLita । hariShadim sEviselo - Mankutimma ॥ 711 ॥
ಈ ಜಗತ್ತೇ ಕೋಸಲ ದೇಶದಂತೆ. ಆ ರಘುವರನೇ ಪರಮಾತ್ಮನೆಂಬಂತೆ ರಾಮನ ಆಜ್ಞೆಯನ್ನು ಪಾಲಿಸುವವನಂತೆ ರಾಜ್ಯಯವನಾಳಿದ ಭರತನಂತೆ ನಾವು ಈ ಸೃಷ್ಟಿಯ ಅರಸನಾದ ಆ ಪರಮಾತ್ಮನ ರಾಜ್ಯವಾದ ಈ ಜಗತ್ತಿನಲ್ಲಿ ಅವನು ರೂಪಿಸಿರುವ ನಿಯಮಗಳಂತೆ ನಮ್ಮ ಜೀವನವನ್ನು ಹರುಷದಿಂದ ನಡೆಸಬೇಕು ಎಂದು ಬದುಕಿನ ಸುಲಭ ಆದರೂ ಸಂತೋಷದಾಯಕವಾದ ವಿಧಾನವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.
This world is like Kosala (Kingdom of Rama). The creator is like Rama. Like Bharata we are all just care-takers following orders. The owner is still the king. But the administration of this world is in our hands. Let us serve him with joy. - Mankutimma
Video Coming Soon
Detailed video explanations by scholars and experts will be available soon.